ನೌಕಾಪಡೆಯ ಹೊಸ ಉಪ ಮುಖ್ಯಸ್ಥರ ನೇಮಕ
ವೈಸ್ ಎಡ್ಮಿರಲ್ ದಿನೇಶ್ ಕೆ ತ್ರಿಪಾಠಿಯವರನ್ನು ಭಾರತೀಯ ನೌಕಾ ಪಡೆಯ ಹೊಸ ಉಪ ಮುಖ್ಯಸ್ಥರನ್ನಾಗಿ ನೇಮಿಸಲು ಭಾರತೀಯ ಸರಕಾರವು ಒಪ್ಪಿಗೆ ಮುದ್ರೆ ಒತ್ತಿತು. ಇದೇ ವೇಳೆ ಹಲವು ಉನ್ನತ ನೇಮಕಾತಿಗಳಿಗೂ ಸರಕಾರದ ಒಪ್ಪಿಗೆ ಬಿತ್ತು.
ಸದ್ಯ ನೌಕಾಪಡೆಯ ಪಶ್ಚಿಮ ಕಮಾಂಡಿನಲ್ಲಿ ಬಾವುಟ ಕಮಾಂಡಿಂಗ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೈಸ್ ಎಡ್ಮಿರಲ್ ಸೂ ಸಿಂಗ್ ಅವರು ತ್ರಿಪಾಠಿಯವರ ಜಾಗಕ್ಕೆ ಬಡ್ತಿ ಪಡೆಯುತ್ತಿದ್ದಾರೆ. ಹಲವು ಬಡ್ತಿ ನಡೆದಿದ್ದು ಇವರೆಲ್ಲರೂ ಜನವರಿ 2024ರಿಂದ ಹೊಸ ಹುದ್ದೆಯನ್ನು ವಹಿಸಿಕೊಳ್ಳುವರು.