ಕಡಬ: ಪಟ್ಟಣ ಪಂಚಾಯತ್, ಗ್ಯಾರೇಜ್ ಮಾಲಕರ ಸಂಘದಿಂದ ಸ್ವಚ್ಛತಾ ಕಾರ್ಯಕ್ರಮ

ಕಡಬ ಪಟ್ಟಣ ಪಂಚಾಯತ್, ಕಡಬ ತಾಲೂಕು ಗ್ಯಾರೇಜ್ ಮಾಲಕರ ಹಾಗೂ ಸಹೋದ್ಯೋಗಿಗಳ ಸಂಘ (ರಿ ), ಕಡಬ, ಇವರ ಸಹಭಾಗಿತ್ವದಲ್ಲಿ ಮಹಾತ್ಮ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಪ್ರಯುಕ್ತ ಕಡಬ ಪಟ್ಟಣ ಸ್ವಚ್ಛತಾ ಕಾರ್ಯಕ್ರಮದ ಉದ್ಘಾಟನೆ ಕಡಬದ ಶ್ರೀ ಗಣೇಶ್ ಬಿಲ್ಡಿಂಗ್ ಕಟ್ಟಡದ ಎದುರುಗಡೆ ನಡೆಯಿತು. ಕಾರ್ಯಕ್ರಮವನ್ನು ಕಡಬ ತಾಲೂಕು ಉಪ ತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸ್ವಚ್ಚತೆ ಪ್ರತಿಯೊಬ್ಬರ ಮನೆ ಮನಗಳಲ್ಲಿ ಮೂಡಬೇಕು ಎಂದರು.

ಕಡಬ ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ಪಕೀರ ಮೂಲ್ಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಡಬ ಪಟ್ಟಣ ಪಂಚಾಯತ್ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಡಬ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಗೌರವಾಧ್ಯಕ್ಷ ಸುಂದರ ಗೌಡ ಮಂಡೇಕರ. ಅಧ್ಯಕ್ಷರದ ಅಶೋಕ್ ಕುಮಾರ್, ಸದಸ್ಯರದ ರಾಜಪ್ರಕಾಶ್ ಕುಂಡಾಜೆ, ದೇವಣ್ಣ, ಶಿವರಾಮ,ಅಶೋಕ್ ದೇವಾಡಿಗ, ರಾಮಚಂದ್ರ ಮಂಡೆಕರ ಬಾಲಕೃಷ್ಣ ಪನ್ಯಾಡಿ, ಹರ್ಷ ಕಲ್ಲರ್ಪೆ,ವಿವಿಧ ಗ್ಯಾರೇಜು ಮಾಲಕರು ಸಿಬ್ಬಂದಿಗಳು ಉಪಸ್ಥಿತರಿದ್ದರು.ಕಡಬ ಪಟ್ಟಣ ಪಂಚಾಯತಿ ಸಿಬ್ಬಂದಿಗಳಾದ, ವಾರಿಜ ಕೀರ್ತನ್ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.