ಕಾರ್ಕಳ: ಡಾ. ಬಿ.ಆರ್. ಅಂಬೇಡ್ಕರ್ ಮಹಾಪರಿನಿರ್ವಾಣ ದಿನ
ಭಾರತ ರತ್ನ ಸಂವಿಧಾನಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ರವರ 67ನೇ ಮಹಾ ಪರಿ ನಿರ್ವಾಣ ದಿನವಾದ ಇಂದು ಕಾರ್ಕಳ ತಾಲೂಕು ಕಚೇರಿ ಬಳಿ ಇರುವ ಪ್ರತಿಮೆಗೆ ದಂಡಾಧಿಕಾರಿ ನರಸಪ್ಪ ರವರು ಪ್ರತಿಭೆಗೆ ಮಾಲಾರ್ಪಣೆ ಮತ್ತು ಗೌರವ ಸಮರ್ಪಣೆ ಮಾಡಿದರು.
ಇದೇ ವೇಳೆ ಮಾತನಾಡಿದ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಮಾನತೆಯ ಹರಿಕಾರ. ಇಂದು ಅವರ ಮಹಾ ಪರಿನಿರ್ವಾಣದ ದಿನಾಚರಣೆಯನ್ನು ದೇಶದ ಎಲ್ಲಾ ಕಡೆ ಆಚರಿಸುತ್ತಿದ್ದಾರೆ. ಅಂಬೇಡ್ಕರ್‍ರವರ ವಿಚಾರಧಾರೆಗಳು ದೇಶಕ್ಕೆ ಎಷ್ಟು ಪ್ರಾಮುಖ್ಯವಾಗಿದೆ ಎಂದು ಎಲ್ಲರಿಗೂ ತಿಳಿದ ವಿಷಯವಾಗಿದೆ ಎಂದರು.
ಕಾರ್ಕಳ ತಾಲೂಕು ದಲಿತ ಸಂಘರ್ಷ ಸಮಿತಿ ಪ್ರಧಾನ ಕಾರ್ಯದರ್ಶಿಯಾದ ನ್ಯಾಯವಾದಿ ರಾಘವ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು. ಪುರಸಭಾ ಸದಸ್ಯರುಗಳು ಸದಸ್ಯರಾದ ಸೋಮನಾಥ್ ನಾಯಕ್, ರಮೇಶ್ ನಿಟ್ಟೆ, ದಲಿತ ಸಂಘರ್ಷ ಸಮಿತಿಯ ಉಪ ಪ್ರಧಾನಿ ಸಂಚಾಲಕರಾದ ರಮೇಶ್ ಬಿ .ಉಪಸ್ಥಿತರಿದ್ದರು.