ಕಾಸರಗೋಡು: ನಟಿ ರೂಪ ವರ್ಕಾಡಿ ಅವರಿಗೆ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯಿಂದ ಕೊಡಮಾಡುವ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ನಟಿ ರೂಪ ವರ್ಕಾಡಿ ಅವರು ಭಾಜನರಾಗಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿ ಮತ್ತು ಕಲೆಗಳ ಅಭಿವೃದ್ಧಿಗಾಗಿ ಅವಿರತ ಶ್ರಮಿಸುತ್ತಿರುವ ಗಡಿನಾಡ ಸಾಹಿತ್ಯ. ಸಾಂಸ್ಕøತಿಕ ಅಕಾಡೆಮಿ ವತಿಯಿಂದ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಕಾಸರಗೋಡಿನಲ್ಲಿ ನಡೆಯಿತು.
ಚಲನಚಿತ್ರ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ನಟಿ ರೂಪ ವರ್ಕಾಡಿ ಅವರು ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಾರ್ಯಕ್ರಮದಲ್ಲಿ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು. ರೂಪ ವರ್ಕಾಡಿ ಅವರನ್ನು ನವ ಯಾತ್ರೆ ಕೇರಳ ಕಾರ್ಯಕ್ರದಮಲ್ಲಿ ಕೇರಳದ ಸಿಎಂ ಪಿಣರಾಯಿ ವಿಜಯನ್ ಅವರು ಸನ್ಮಾನಿಸಿದರು.
