ಕಿನ್ನಿಗೋಳಿ: ಮೆನ್ನಬೆಟ್ಟುವಿನ ಜಮೀನಿನಲ್ಲಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ ವಿರೋಧ, ಗ್ರಾಮಸ್ಥರಿಂದ ಪ್ರತಿಭಟನೆ

ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ತ್ಯಾಜ್ಯ ವಸ್ತುಗಳನ್ನು ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮೆನ್ನಬೆಟ್ಟು ಗ್ರಾಮದಲ್ಲಿರುವ 17 ಗೋಮಾಳ ಜಮೀನಿನಲ್ಲಿ ಹಾಕಿ ಘಟಕ ನಿರ್ಮಾಣ ಮಾಡುವುದನ್ನು ವಿರೋಧಿಸಿ ಹಾಗೂ ಜಮೀನಿನಲ್ಲಿ ದಾಖಲು ಆಗಿರುವ ಮಂಜುರಾತಿಯನ್ನು ರದ್ದು ಮಾಡುವ ಬಗ್ಗೆ ಗ್ರಾಮಸ್ಧರಿಂದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಂಭಾಗ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್ ಕಟೀಲ್ ಮಾತನಾಡಿ ಕಿನ್ನಿಗೋಳಿ ತ್ಯಾಜ್ಯ ನಿರ್ವಹಣೆ ಸರಿಯಾದ ರೀತಿಯಲ್ಲಿ ನಡೆಯುತ್ತಿದ್ದು ತ್ಯಾಜ್ಯ ನಿರ್ವಹಣೆಗೆ ಇಲ್ಲಿ ಬೇಕಾದಷ್ಟು ಜಮೀನು ಕೂಡ ಇದೆ.ಪ್ರಸ್ತುತ ಕಟೀಲಿನ ಬಲ್ಲಾಣದಲ್ಲಿ ಬಜಪೆಯ ತ್ಯಾಜ್ಯಕ್ಕೆ ಘಟಕ ಸ್ಧಾಪನೆಗೆ ನಮ್ಮ ವಿರೋಧವಿದೆ ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶೈಲಾ ಸಿಕ್ವೇರ ಅವರು ಮಾತನಾಡಿ, ಗ್ರಾಮಸ್ಧರಿಗೆ ಯಾವುದೇ ಮಾಹಿತಿ ನೀಡದೆ ಘಟಕ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ.ತ್ಯಾಜ್ಯ ಘಟಕದಿಂದ ನಮಗೆ ಸಾಕಷ್ಟು ತೊಂದರೆ ಇದ್ದು ಇದನ್ನು ವಿರೋಧಿಸುತ್ತೇವೆ ಈ ಸಂಧರ್ಭ ಕಿನ್ನಿಗೋಳಿ ಪಟ್ಟಣ ಮುಖ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾ ಸಭೆಯಲ್ಲಿ ಸೋಂದಾ ಭಾಸ್ಕರ್ ಭಟ್.ಸ್ಟ್ಯಾನಿ ಪಿಂಟೋ.ಭುವನಾಭಿರಾಮ ಉಡುಪ.ಕುಶಲ ಕಿನ್ನಿಗೋಳಿ.ಶ್ರೀಧರ ಶೆಟ್ಟಿ ಕೊಡೆತ್ತೂರು.ಡಾಲ್ಫಿ ಸಾಂತುಮಾಯೇರ್.ವಿಲ್ಸನ್ ಕಟೀಲ್.ಸುನಿಲ್ ಸಿಕ್ವೇರ.ಲೋಕಯ್ಯ ಸಾಲ್ಯಾನ್ ಹೋರಾಟ ಸಮಿತಿ ಅಧ್ಯಕ್ಷ ಸಂಜೀವ ಮಡಿವಾಳ.ಅನಿತಾ ಅರಾನ್ಹ ಹಾಗೂ ಗ್ರಾಮಸ್ಧರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.