ಕೋಟೇಶ್ವರ – ಬೆಂಕಿ ಅವಘಡ, ಫ್ಯಾನ್ಸಿ ಸ್ಟೋರ್, ಬಟ್ಟೆಯಂಗಡಿ, ವಾಸದ ಮನೆ ಭಾಗಶ ಹಾನಿ

ಕೋಟೇಶ್ವರದ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನ ಬಳಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ಎರಡು ಫ್ಯಾನ್ಸಿ ಸ್ಟೋರ್ ಭಸ್ಮವಾಗಿದೆ. ಬಟ್ಟೆಯಂಗಡಿ, ವಾಸದ ಮನೆ ಭಾಗಶಃ ಸುಟ್ಟು ಹೋಗಿದೆ. ಕೋಟೇಶ್ವರ ಶಿವರಾಮ ಪೂಜಾರಿ ಎಂಬರಿಗೆ ಸೇರಿದ ವಾಣಿಜ್ಯ ಸಂಕೀರ್ಣದ ಕೆಳ ಅಂತಸ್ತಿನಲ್ಲಿ ಬಾಡಿಗೆಗಿದ್ದ ಸುಧಾಕರ ಜೋಗಿ ಎಂಬವರ ಮಹಾಲಕ್ಷ್ಮೀ ಕಂಗನ್ ಎರಡು ಶಾಪ್, ಸುಧಾಕರ ಜೋಗಿ ಅಂಗಡಿ ತಾಗಿಕೊಂಡಿದ್ದ ರಾಜೀವ ಶೆಟ್ಟಿ ಎಂಬವರ ರೆಡಿಮೇಡ್ ಬಟ್ಟೆ ಹಾಗೂ ಟೈಲರಿಂಗ್ ಶ್ಯಾಪ್, ಶಿವರಾಮ ಪೂಜಾರಿ ವಾಸದ ಮನೆ ಬೆಂಕಿಯ ಕೆನ್ನಾಲಗೆಯಿಂದ ಸುಟ್ಟಿವೆ.

ಸುಧಾಕರ್ ಜೋಗಿಯವರ ಪ್ಯಾನ್ಸಿ ಸ್ಟೋರ್‍ನಲ್ಲಿದ್ದ 3 ಲಕ್ಷ ನಗದು ಹಾಗೂ ಸುಟ್ಟ ಪರಿಕರದ ಮೌಲ್ಯ 60 ಲಕ್ಷ ರೂ ಆಗಿದೆ ಎನ್ನಲಾಗಿದ್ದು ಬಟ್ಟೆಯಂಗಡಿ ಮಾಲೀಕರಿಗೆ 3 ಲಕ್ಷ ಹಾನಿ ಹಾಗೂ ವಾಸದ ಮನೆಗೆ 8 ಲಕ್ಷ ರೂ.ನಷ್ಟ ಸಂಭವಿಸಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ. ಮಧ್ಯಾಹ್ನ 2.30ರ ಸುಮಾರಿಗೆ ಬೆಂಕಿ ಕಾಣಿಸಿದ್ದು, ಪರಿಸರದ ನಾಗರಿಕರು ಅಗ್ನಶಾಮಕ ದಳ ಹಾಗೂ ಪೆÇಲೀಸರಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ದಳ, ಪೆÇಲೀಸ್ ಹಾಗೂ ಪರಿಸರ ವಾಸಿಗಳು ಹರಸಾಹಸದಿಂದ ಸಂಜೆ ಆರುಗಂಟೆ ಸುಮಾರಿಗೆ ಬೆಂಕಿ ಹತೋಟಿಗೆ ತಂದರೂ ಕೂಡ ಅಷ್ಟರಲ್ಲಾಗಲೇ ವ್ಯಾಪಕ ಹಾನಿ ಸಂಭವಿಸಿತ್ತು.

Related Posts

Leave a Reply

Your email address will not be published.