ವಿಚಿತ್ರ ತಿರುವು ಪಡೆಯುವ ಊರಿನ ಹೆಸರುಗಳು

ಭತ್ತ ಅನ್ನಕ್ಕೆಂದು ಪಿಡಿದರೆ ಬಾಳೆ ಹಣ್ಣದು ಆಯ್ತು ದೈವವೆ! ಮಂಗಳೂರಿನಲ್ಲಿ ಒಂದು ಬಾಳೆ ಬಯ್ಲು (ಬಯಲು) ಇದೆ. ಈ ಭತ್ತ ಬೆಳೆಯುವ ತುಳು ಜಾಗದ ನೆಲದ ಹೆಸರು ಬದಲಾದುದು ಬರೇ ಶತಮಾನದ ಕತೆ.

ಬಾರ ಬಯ್ಲ್ ಎಂದರೆ ಭತ್ತದ ಬಯಲು. ರಾಷ್ಟ್ರೀಯ ಹೆದ್ದಾರಿ ಮಾಜೀ 17 ಹಾಲಿ 66 ಇದರ ನಡುವೆ ಹೋಗಿ, ಈಗ ಇಲ್ಲಿ ಕಟ್ಟಡಗಳು ಬೆಳೆದಿವೆ.

ತುಳು ಕನ್ನಡದಲ್ಲಿ ರ ಳ ಲ ಬದಲಾವಣೆ ಬಹಳ ಇವೆ. ತುಳು ಶಬ್ದಗಳಾದ ಕೋರಿ, ಕೆರು, ತರೆ, ಕುರೆ ಕನ್ನಡದಲ್ಲಿ ಕೋಳಿ, ಕೊಲೆ, ತಲೆ, ಕೊಳೆ ಹೀಗೆ ಆಗಿವೆ. ಇದರಲ್ಲಿ ತುಳು ಬಾರೆ ಕನ್ನಡಕ್ಕೆ ಸಿಲುಕಿ‌ ಬಾಳೆ ಆಗಿದೆ ಅರ್ಥ ಭತ್ತ ಹೋಗಿ ಬಾಳೆ ಹಣ್ಣಾಗಿದೆ. ಇಂಥ ಸ್ಥಳನಾಮಗಳು ತುಳುನಾಡಿನ ಎಲ್ಲೆಡೆ ಇವೆ.

Related Posts

Leave a Reply

Your email address will not be published.