ಮಂಗಳೂರು || ಎಸ್‍ಬಿಇಬಿಎ “ಕೌಮಾರಂ”-ಬಾಲ ರೋಗ ಚಿಕಿತ್ಸೆಯ ವಿಚಾರ ಸಂಕಿರಣ

ಭಾರತ್ ಮಿಷನ್ ಬಿಷಾಕ್ ಬಿಎಮ್‍ಬಿ ಮಂಗಳೂರು ಘಟಕದ ವೈದ್ಯರುಗಳಾದ ಡಾ. ಹರಿಕೃಷ್ಣ ಭಟ್, ಡಾ. ಸೌಮ್ಯಶ್ರೀ ಕೆ ಎಂ ಮತ್ತು ಡಾ. ಜ್ಯೋತಿ ಭಾರಧ್ವಾಜ್ ರವರು ಆಯೋಜಿಸಿದ ಎಸ್‍ಬಿಇಬಿಎ “ಕೌಮಾರಂ” – ಬಾಲ ರೋಗ ಚಿಕಿತ್ಸೆಯ ಬಗ್ಗೆ ರಾಷ್ಟ್ರೀಯ ಮಟ್ಟದ 50ನೇ ವಿಚಾರ ಸಂಕಿರಣವು ಮಂಗಳೂರು ನಗರದ ಜಿ. ಎಚ್. ಎಸ್ ರೋಡ್‍ನ ಹೋಟೆಲ್ ವರ್ದ ಸಾಫ್ರೋನ್‍ನಲ್ಲಿ ಸಂಪನ್ನಗೊಂಡಿತು.

ಭಾರತದ ವಿವಿಧ 14 ರಾಜ್ಯಗಳಿಂದ ಬಂದ ಆಯುರ್ವೇದ ವೈದ್ಯರು ಪಾಲ್ಗೊಂಡಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ರಾಜ್ ಕುಮಾರ್ ಮತ್ತು ಡಾ. ರಮ್ಯ ಕೃಷ್ಣನ್ ಸಹ ಪ್ರಾಧ್ಯಾಪಕರು, ರಾಜೀವ್ ಗಾಂಧಿ ಆಯುರ್ವೇದ ವೈದ್ಯ ವಿದ್ಯಾಲಯ ಮಾಹೆ ಇವರು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ 2 ದಿನಗಳ ಉಪನ್ಯಾಸವನ್ನು ನೀಡಿದರು.

“ಹಸ್ತಾಲಂಬ ವಿಎಫ್‍ಎಫ್‍ಎ” ಹಾಗೂ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಎಲ್ಲಾ ತರದ ಜ್ವರಕ್ಕೆ ಪ್ರಥಮ ಚಿಕಿತ್ಸೆ ನೀಡುವ ಉಚಿತ ಒನ್‍ಲೈನ್ ಪ್ರೋಗ್ರಾಮ್‍ನ ಎಲ್ಲಾ ವೈದ್ಯರಿಗೆ ಹಾಗೂ ಸ್ವಯಂ ಸೇವಕರಿಗೆ ಸನ್ಮಾನ ಕಾರ್ಯಕ್ರಮವು ನೆರವೇರಿತು.

ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ರಾಮಕೃಷ್ಣ ಮಠ ಮಂಗಳೂರಿನ ಅಧ್ಯಕ್ಷರಾದ ಶ್ರೀಮತ್ ಸ್ವಾಮಿ ಜಿತಕಾಮಾನಂದ ಸ್ವಾಮೀಜಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆರೋಗ್ಯ ಪಾಲನೆಯ ಮಹತ್ವವನ್ನು ತಿಳಿಯಪಡಿಸಿ, ಜೊತೆಗೆ ಎಸ್‍ಬಿಇಬಿಎ ವೈದ್ಯರುಗಳ “ಹಸ್ತಾಲಂಬ – ವಿಎಫ್‍ಎಫ್‍ಎ” ಉಚಿತ ಸೇವೆಯನ್ನು ಶ್ಲಾಘಿಸಿ ಎಲ್ಲರನ್ನೂ ಆಶೀರ್ವದಿಸಿ, ಉತ್ತಮ ಆರೋಗ್ಯದಿಂದ ಮಾತ್ರವೇ ಧರ್ಮ ಸಾಧನೆ ಸಾಧ್ಯ ಎಂದು ನುಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಡಾ. ರಾಜ್ ಕುಮಾರ್, ಡಾ. ರಮ್ಯ ಕೃಷ್ಣನ್ ರವರು “ಹಸ್ತಾಲಂಬ ವಿಎಫ್‍ಎಫ್‍ಎ ಪ್ರೋಗ್ರಾಮ್”ನ ಕಾರ್ಯ ನಿರ್ವಹಣೆಯ ಬಗ್ಗೆ ನೆರೆದಿರುವ ಸಭಿಕರಿಗೆ ತಿಳಿಯಪಡಿಸಿದರು.

ಡಾ. ಹರಿಕೃಷ್ಣ ಭಟ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಸೌಮ್ಯಶ್ರೀ ಕೆ. ಎಂ ರವರು ಎಲ್ಲರನ್ನೂ ಸ್ವಾಗತಿಸಿ, ಡಾ. ಜ್ಯೋತಿ ಭಾರದ್ವಾಜ್ ರವರು ವಂದಿಸಿದರು.

Related Posts

Leave a Reply

Your email address will not be published.