ಮಂಗಳೂರು: ಶೌರ್ಯ ಜಾಗರಣ ರಥಯಾತ್ರೆಗೆ ಭವ್ಯ ಸ್ವಾಗತ

ವಿಶ್ವ ಹಿಂದೂ ಪರಿಷತ್‍ನ 60ನೇ ವರ್ಷದ ಪ್ರಯುಕ್ತ ಬಜರಂಗದಳ ನೇತೃತ್ವದಲ್ಲಿ ನಡೆಯುತ್ತಿರುವ ಶೌರ್ಯ ಜಾಗರಣ ರಥಯಾತ್ರೆ ಇಂದು ಬೆಳಗ್ಗೆ ಮಂಗಳೂರು ಪ್ರವೇಶಿಸಿದ್ದು ಅಡ್ಯಾರ್‍ನಲ್ಲಿ ಭವ್ಯ ಸ್ವಾಗತ ಕೋರಲಾಯಿತು.

ಈ ವೇಳೆ ವಿಎಚ್ ಪಿಯ ಶರಣ್ ಪಂಪ್ ವೆಲ್, ಪುರುಷೋತ್ತಮ್, ಎಂ.ಬಿ ಪುರಾಣಿಕ್ ಮೊದಲಾದವರು ಉಪಸ್ಥಿತರಿದ್ದರು. ಅಪರಾಹ್ನ 2.30ಕ್ಕೆ ಅಂಬೇಡ್ಕರ್ ವೃತ್ತದಿಂದ ಕದ್ರಿ ಮೈದಾನದ ವರೆಗೆ ಭವ್ಯವಾದ ಶೋಭಾಯಾತ್ರೆ ನಡೆಯಲಿದ್ದು, ವಿವಿಧ ಟ್ಯಾಬ್ಲೋಗಳು ಇದರಲ್ಲಿ ಭಾಗವಹಿಸಲಿವೆ.

Related Posts

Leave a Reply

Your email address will not be published.