ಮಿಜೋರಾಂನಲ್ಲಿ ಮುಖ್ಯಮಂತ್ರಿಗಳಿಗೆ ಸೋಲು, ಜೆಡ್‌ಪಿಎಂ ಅಧಿಕಾರಕ್ಕೆ
ಮುಖ್ಯಮಂತ್ರಿ ಜೋರಮ್ ತಂಗ, ಉಪ ಮುಖ್ಯಮಂತ್ರಿ ಸಹಿತ ಹಲವು ಮಂತ್ರಿಗಳ ಸೋಲಿನೊಂದಿಗೆ ಮಿಜೋರಾಂ ನ್ಯಾಶನಲ್ ಫ್ರಂಟ್ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಸಹ ಈ ಸರಕಾರದ ಭಾಗವಾಗಿತ್ತು. ಜೆಡ್‌ಪಿಎಂ ಮೈತ್ರಿ ಕೂಟವು 40 ಸದಸ್ಯ ಬಲದ ಮಿಜೋರಾಂನಲ್ಲಿ 27 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದೆ. ಎಂಎನ್ಎಫ್ ಬರೇ 10 ಕಡೆ ಗೆದ್ದಿದೆ. ಬಿಜೆಪಿ 2, ಕಾಂಗ್ರೆಸ್ 1 ಸ್ಥಾನ ಪಡೆದಿವೆ.