ಮುಂಬೈ : ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ – ವಿಟ್ಲದ ಕರಾಟೆ ಪಟುಗಳಿಗೆ ಪ್ರಶಸ್ತಿ
ಮುಂಬೈನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಟ್ಲ ಆಲ್ ಇಂಡಿಯಾ ಶಿಟೋ ರಿಯೋ ಕರಾಟೆ ಡೊ ಯೂನಿಯನ್ ತಂಡದ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಶೋಟೊಕನ್ ಕರಾಟೆ-ಡೊ ಫೆಡರೆಷನ್ ಇವರ ಆಶ್ರಯದಲ್ಲಿ ಮರಾಠ ಮಂಡಲ್ ಹಾಲ್ ಮುಲುಂದ್ ಮುಂಬೈ ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಇಂಡಿಪೆಂಡೆನ್ಸ್ ಕಪ್ ಕರಾಟೆ ಚಾಂಪಿಂಯನ್‍ಶಿಪ್‍ನಲ್ಲಿ ಆಲ್ ಇಂಡಿಯಾ ಶಿಟೋ ರಿಯೋ ಕರಾಟೆ ಡೊ ಯೂನಿಯನ್ತಂ ಡದ ಕರಾಟೆ ವಿದ್ಯಾರ್ಥಿಗಳು ಭಾಗವಹಿಸಿದ್ದು 12 ಪ್ರಥಮ ಸ್ಥಾನ 7 ದ್ವಿತೀಯ 8 ತೃತೀಯ ಸ್ಥಾನಗಳಿಸಿದ್ದಾರೆ ಹಾಗೂ ಉತ್ತಮ ತಂಡ ಪಶಸ್ತಿಯನ್ನು ಪಡಕೊಂಡಿದ್ದಾರೆ.
ಈ ಮಕ್ಕಳು ಸೆನ್ಸಾಯಿ ಮಾಧವ ಅಳಿಕೆ ಮತ್ತು ಸೆನ್ಸಾಯಿ ವಿಕ್ಟರ್ ಡಿಸೋಜ ಇವರ ತರಬೇತಿಯಲ್ಲಿ ಸಿದ್ದರಾಗಿದ್ದರು ಮತ್ತು ದಿಲೀಪ್, ರೋಹಿತ್ ಎಸ್.ಎನ್. ನಿವೇದಿತಾ, ನಿಖಿಲ್ ಕೆ.ಟಿ ಇವರು ಸಹ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದರು.