ನಾಗೂರಿನ ಶ್ರೀ ವೀರ ಹನುಮಾನ್ ದೇವಸ್ಥಾನ, ಶ್ರೀ ಶನೇಶ್ವರ ಸ್ವಾಮಿ ದೇವಳ : ಹನುಮ ಜಯಂತಿ
ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ನಾಗೂರಿನ ಶ್ರೀ ವೀರ ಹನುಮಾನ್ ದೇವಸ್ಥಾನ ಮತ್ತು ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಾ.30ರ ಶ್ರೀ ರಾಮನವಮಿಯಂದು ಪ್ರಾರಂಭಗೊಂಡು, ಏಪ್ರಿಲ್ 6ರ ವರೆಗೆ ಹನುಮಾನ್ ಜಯಂತಿ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರದಿಂದ ನಡೆಯಿತು.
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ, ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಯವರ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ
ದಿವ್ಯ ಆಶೀರ್ವಾದದೊಂದಿಗೆ ಶ್ರೀ ವೀರ ಹನುಮಾನ್ ದೇವರಿಗೆ ಹಾಗೂ ಪರಿವಾರ ದೇವರುಗಳಿಗೆ ಕಲಾತತ್ವಹೋಮ ಮತ್ತು 108 ಕಲಶಾಭಿಷೇಕ ಮಹೋತ್ಸವ ನೆಡೆಯಿತು.
ಹನುಮ ಜಯಂತಿ ಪ್ರಯುಕ್ತ ವಿವಿಧ ಟ್ಯಾಬ್ಲೋಗಳ ಮೂಲಕ ಭವ್ಯ ಮೆರವಣಿಗೆ ಮತ್ತುಶ್ರೀ ದೇವರಿಗೆ ವಿಶೇಷ ಪೂಜೆ ಮಧ್ಯಾಹ್ನ ಅನ್ನಸಂತರ್ಪಣೆ ನೆಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ಭಜನಾ ತಂಡಗಳಿಂದ “ಭಜನಾ ಕಾರ್ಯಕ್ರಮ” ನೆಡೆಯಿತು.
ರಾತ್ರಿ 9 ಗಂಟೆಗೆ ಸಾನಿಧ್ಯದಲ್ಲಿ ಶ್ರೀ ಪಂಜುರ್ಲಿ, ಜುಮಾದಿ, ಮಾಸ್ತಿ, ಜೈನ ಜಟ್ಟಿಗ, ಹ್ಯಾಗುಳಿ, ಕಲ್ಕುಡ-ವಡ್ತ, ಸ್ವಾಮಿಕೊರಗಜ್ಜ ಮತ್ತು ಕ್ಷೇತ್ರ ಪಾಲ ದೈವಗಳ ಸಿರಿ ಸಿಂಗಾರ ಕೋಲ ಸೇವೆ ಅದ್ದೂರಿಯಾಗಿ ಸಂಪನ್ನಗೊಂಡಿದೆ.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ನಾಗೂರಿನ ಧರ್ಮದರ್ಶಿಗಳಾದ ಎಸ್.ಗಿರಿ ಶೆಟ್ಟಿ, ಸೇವಾ ಸಮಿತಿಯ ಅಧ್ಯಕ್ಷರಾದ ನಾಣು ಡಿ. ಚಂದನ್ ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ಶೆಟ್ಟಿ, ಉಪಾಧ್ಯಕ್ಷರಾದ ಡಾ. ಪ್ರವೀಣ್ ಶೆಟ್ಟಿ, ಗೌರವಾಧ್ಯಕ್ಷರಾದ ತಿಮ್ಮ ವಿ ದೇವಾಡಿಗ ಮರವಂತೆ
ಲೆಕ್ಕ ಪರಿಶೋಧಕರಾದ ಶಿರಾಘವೇಂದ್ರ ಖಾರ್ವಿ, ಶ್ರೀ ಶನೇಶ್ವರ ದೇವಾಸ್ಥಾನ ಶ್ರೀ ಕ್ಷೇತ್ರ ನಾಗೂರಿನ ಅರ್ಚಕರಾದ ನಾರಾಯಣ ಎಮ್. ಶ್ರೀ ವೀರ ಹನುಮಾನ್ ದೇವಾಸ್ಥಾನದ ಪ್ರಧಾನ ಅರ್ಚಕರಾದ ಗಣಪತಿ ಭಟ್, ಚಿಂತಕರು ಶುಭಾಷ್ ಶೆಟ್ಟಿ, ಹಿತ ಶ್ರೀ ಸತೀಶ್ ನಾಯರಿ
ರಾಜಕುಮಾರ್ ಶೆಟ್ಟಿ, ಹಿತ ವಾಸುದೇವ್ ಕಾರಂತ್, ಸಿ ಎಸ್ ಖಾರ್ವಿ ಕೊಡೇರಿ, ಧರ್ಮದರ್ಶಿಗಳು ಅಧ್ಯಕ್ಷರು ಗೌರವಾಧ್ಯಕ್ಷರು ಪದಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಶ್ರೀ ವೀರ ಹನುಮಾನ್ ದೇವಸ್ಥಾನ ಮತ್ತು ಶ್ರೀ ಶನೀಶ್ವರ ಸ್ವಾಮಿ ದೇವಸ್ಥಾನ ಶ್ರೀ ಕ್ಷೇತ್ರ ನಾಗೂರು ಊರ ಗ್ರಾಮಸ್ಥರು ಉಪಸ್ಥಿತರಿದ್ದರು.