ನೆಲ್ಯಾಡಿ: ಕೊಣಾಲು ಸಂತ ತೋಮಸರ ದೇವಾಲಯದಲ್ಲಿ ಸಂಭ್ರಮದ ಕೊಯಿನೋನಿಯ 2023 ಆಚರಣೆ
ನೆಲ್ಯಾಡಿ: ಕೊಣಾಲು ದಿಯುವಾಂಜಲಿಸ್ಟಿಕ್ ಅಸೋಸಿಯೇಷನ್ ಆಫ್ ದ ಈಸ್ಟ್ ಇದರ ಅದೀನದಲ್ಲಿರುವ ಸಂತ ತೋಮಸ್ ಯಾಕೋಬಾಯ ಸುರಿಯಾನಿ ಚರ್ಚಿನಲ್ಲಿ ತಾಯಂದಿರಿಗೋಸ್ಕರ ಕೊಯಿನೋನಿಯಾ ಮದರ್ಸ್ ಡಿವೋಷನಲ್ ಫೆಲೋಶಿಪ್ ಕಾರ್ಯಕ್ರಮ ಮರ್ತ ಮರಿಯಾಮ್ ಮಹಿಳಾ ಸಮಾಜದ ನಿರ್ದೇಶಕರಾಗಿರುವ ವೆರಿ.ರೇ. ಪಿ.ಕೆ ಅಬ್ರಹಾಂ ಕೋರ್ ಎಪಿಸ್ಕೋಪೋ ಅವರ ನಿರ್ದೇಶನದಲ್ಲಿ ಏರ್ಪಡಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ತೋಮೊಸರ ದೇವಾಲಯದ ವಿಕಾರ್ ಆಗಿರುವ ರೇ.ಫಾ.ಅನೀಶ್ ಪಾರಾಶೆರಿಲ್ ವಹಿಸಿದ್ದರು.
ಮಲಂಕರ ಕ್ಯಾಥೋಲಿಕ್ ಸಭೆಯ ವಿಕಾರ್ ಜನರಲ್ ಆಗಿರುವ ವೆರಿ.ರೇ.ಡಾಕ್ಟರ್.ಎಲ್ದೊ ಪುತ್ತನ್ ಕಂಡತ್ತಿಲ್ ಉದ್ಘಾಟಿಸಿ ಕಣ್ಮರೆಯಾಗುತ್ತಿರುವ ಸಮೂಹಗಳಿಗೆ ಇಂತಹ ಕಾರ್ಯಕ್ರಮಗಳು ಹೊಸ ಆಯಾಮವನ್ನು ತರಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಸಂಚಾಲಕರು ಹಾಗೂ ಮ್ಯಾನೇಜರ್ ಆಗಿರುವ ರೇ.ಫಾ.ನೋಮಿಸ್ ಕುರಿಯಾಕೋಸ್ ಶುಭಾಶಂಷನೆಗೈದರು.
ಮರ್ತ ಮರಿಯಂ ಮಹಿಳಾ ಸಮಾಜದ ನಿರ್ದೇಶಕರಾದ ವೆರಿ.ರೇ.ಪಿ.ಕೆ. ಅಬ್ರಹಾಂ ಕೊರೋಪಿಸ್ಕೋಪೋ ಇವರ ನೇತೃತ್ವದಲ್ಲಿ ತಾಯಂದಿರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಈ ಸ್ಪರ್ಧೆಗಳ ತೀರ್ಪುಗಾರರಾಗಿ ಉದನೆಯ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್‌ನ ಸಂಚಾಲಕರಾದ ರೇ.ಫಾ.ಹನಿ ಜೇಕಬ್, ಜ್ಞಾನೋದಯ ಬೆಥನಿ ಪದವಿ ಕಾಲೇಜಿನ ಉಪ ಪ್ರಾಂಶುಪಾಲರಾದ ರೇ.ಫಾ.ಜಿಜನ್ ಅಬ್ರಹಾಔ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಗಳಾದ ಅಬ್ರಹಾಂ ವರ್ಗೀಸ್, ಚರ್ಚಿನ ಖಜಾಂಜಿ, ಕಾರ್ಯದರ್ಶಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ನಿರ್ದೇಶಕರಾಗಿರುವ ವೆರ.ರೇ.ಪಿ.ಕೆ ಅಬ್ರಹಾಂ ಕೊರಪಿಸ್ಕೋಪೋ ಸ್ವಾಗತಿಸಿದರು, ಮರ್ತ ಮರಿಯಂ ಮಹಿಳಾ ಸಮಾಜದ ಉಪಾಧ್ಯಕ್ಷರಾಗಿರುವ ಶ್ರೀಮತಿ ರೀನಾ ಎಸ್ ವಂದಿಸಿದರು, ಶ್ರೀಮತಿ ಪ್ರೀತಿ ಸಾಜು ನಿರೂಪಿಸಿದರು.