ನೆಲ್ಯಾಡಿ: 7.30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟೀಕರಣ ರಸ್ತೆ ಉದ್ಘಾಟನೆ
ನೆಲ್ಯಾಡಿ: 7.30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟೀಕರಣ ರಸ್ತೆ ಉದ್ಘಾಟನೆ.
ನೆಲ್ಯಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2ನೇ ವಾರ್ಡಿನ ಕೊಟೇಲು, ದರ್ಖಾಸು ಎಂಬಲ್ಲಿ 7.30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟೀಕರಣ ರಸ್ತೆ ಉದ್ಘಾಟನೆ ಮಾ.04 ರಂದು ನೆರವೇರಿತು.
ನೆಲ್ಯಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಸಲಾಂ ಬಿಲಾಲ್, ಉಪಾಧ್ಯಕ್ಷೆ ಶ್ರೀಮತಿ ರೇಶ್ಮಾ ಶಶಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
15ನೇ ಹಣಕಾಸು ಯೋಜನೆಯಡಿ ಪಂಚಾಯತ್ ಅನುದಾನ 4 ಲಕ್ಷ ಹಾಗೂ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 3.60 ಲಕ್ಷ ಅನುದಾನದಲ್ಲಿ 152 ಮೀಟರ್ ನಷ್ಟು ಉದ್ದದ ರಸ್ತೆಯನ್ನು ನಿರ್ಮಿಸಲಾಗಿದೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಕೆ.ಪಿ ತೋಮಸ್, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಉಷಾ ಅಂಚನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ. ಎ, ಕಾರ್ಯದರ್ಶಿ ಅಂಗು, ನಿವೃತ್ತ ಉಪತಹಶೀಲ್ದಾರ್ ಗುಡ್ಡಪ್ಪ ಶೆಟ್ಟಿ, ನಜೀರ್, ಇಸ್ಮಾಯಿಲ್ ನೆಲ್ಯಾಡಿ ನೋಟರಿ ವಕೀಲರು, ಗ್ರಾಮ ಪಂಚಾಯತ್ ಸದಸ್ಯರಾದ ಮಹಮ್ಮದ್ ಇಕ್ಬಾಲ್, ಪಂಚಾಯತ್ ನ ಸಿಬ್ಬಂದಿ ವರ್ಗದವರು ಹಾಗೂ ಊರವರು ಉಪಸ್ಥಿತರಿದ್ದರು.
ಮಹಮ್ಮದ್ ಇಕ್ಬಾಲ್ ಸ್ವಾಗತಿಸಿದರು, ಶ್ರೀಮತಿ ರೇಶ್ಮಾ ಶಶಿ ವಂದಿಸಿದರು.