ಮಗನ ಗದ್ದೆಯಿಂದ ಹೂಕೋಸು ಕಿತ್ತ ತಾಯಿ : ಅಮ್ಮನನ್ನೇ ಕಂಬಕ್ಕೆ ಕಟ್ಟಿ ಹೊಡೆದ ಪುತ್ರ
ಒಡಿಶಾ ರಾಜ್ಯದ ಕಿಯೊಂಜಾರ್ ಜಿಲ್ಲೆಯಲ್ಲಿ ಹೂಕೋಸು ಕಿತ್ತು ಪಲ್ಯ ಮಾಡಿ ತಿಂದಿದ್ದಾರೆ ಎಂದು ಮಗನೇ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ನಡೆದಿದೆ.
70ರ ಮಹಿಳೆ ಸರಸಪಸಿ. ಈಕೆಯ ಕಿರಿಯ ಮಗ ಪ್ರತ್ಯೇಕ ಕೃಷಿ ಭೂಮಿ ಹೊಂದಿದ್ದ. ಆಕೆ ಆ ಮಗನ ಹೊಲದಿಂದ ಹೂಕೋಸು ತಂದು ಪಲ್ಯ ಮಾಡಿ ತಿಂದಿದ್ದಳು. ಕೆರಳಿ ಜಗಳಕ್ಕೆ ಬಂದಿದ್ದ ಮಗ. ತಾಯಿಯೂ ಜಗಳಕ್ಕೆ ನಿಂತಳು. ತಾಯಿಯನ್ನೇ ಮಿಂಚುರಿ ಕಂಬಕ್ಕೆ ಕಟ್ಟಿ ಹೊಡೆದಿದ್ದಾನೆ. ಆಗ ಬೇರೆಯವರು ಬಂದು ಬಿಡಿಸಿ ಬಾಸುದೇವಪುರ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಎಸ್‍ಪಿ ತ್ರಿನಾಥ್ ಸೇತಿ ತಿಳಿಸಿದ್ದಾರೆ. ಅಧಿಕಾರಿಗಳು ಮತ್ತು ಜಿಲ್ಲಾಡಳಿತದವರು ಭೇಟಿ ನೀಡಿ ವೃದ್ಧೆಗೆ ಹೊಡೆದ ಸ್ಥಳ ಪರಿಶೀಲನೆ ನಡೆಸಿದರು.