ಪಡುಬಿದ್ರಿ : ಗದ್ದೆಗೆ ಬೆಂಕಿ

ಪಡುಬಿದ್ರಿ ಸೇತುವೆ ಬಳಿ ಗದ್ದೆಗೆ ರಾತ್ರಿ ಬೆಂಕಿ ಬಿದ್ದ ಪರಿಣಾಮ ಬಹಳಷ್ಟು ತಾಳೆ ಮರಗಳು ಬೆಂಕಿಗಾಹುತಿಯಾಗಿದೆ.ಸುಮಾರು ಎರಡು ಗಂಟೆಗಳ ಕಾಲ ಬೆಂಕಿ ಉರಿಯುತ್ತಿದ್ದರೂ ಯಾವುದೇ ಅಗ್ನಿ ಶಾಮಕ ದಳವಾಗಲಿ, ಯಾವುದೇ ಅಧಿಕಾರಿಗಳಾಗಲಿ ಹತ್ತಿರ ಸುಳಿದಿಲ್ಲ. ಹೆದ್ದಾರಿ ಪ್ರಯಾಣಿಕರು ತಮ್ಮ ವಾಹನಗಳನ್ನು ಹೆದ್ದಾರಿಯಲ್ಲಿ ನಿಲ್ಲಿಸಿ ಉರಿಯುತ್ತಿರುವ ದೃಶ್ಯವನ್ನು ವಿಡಿಯೋ ಚಿತ್ರೀಕರಣ ಮಾಡುವುದು ಬಿಟ್ಟರೆ ಅವರು ಅಸಹಾಯಕರಾಗಿದ್ದರು.,

padubidre fire news

ಪಕ್ಕದಲ್ಲೇ ವಿದ್ಯುತ್ ಕಂಬಗಳಿದ್ದು ಮತ್ತಷ್ಟು ಅಪಾಯ ಸಂಭವಿಸುವ ಸಾಧ್ಯತೆ ಇದ್ದು, ಪಕ್ಕದ ಯುಪಿಸಿಎಲ್ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರೂ ಅವರು ಬಾರದ ಹಿನ್ನಲೆಯಲ್ಲಿ, ಸುಮಾರು ಎರಡೂವರೆ ಗಂಟೆ ಬಳಿಕ ದೂರದ ಮಣಿಪಾಲದಿಂದ ಅಗ್ನಿಶಾಮಕ ವಾಹನ ಸಿಬ್ಬಂದಿ ಸಹಿತ ಸ್ಥಳಕ್ಕೆ ಆಗಮಿಸಿದರಾದರೂ, ಸುಮಾರು ಅರ್ಧ ಗಂಟೆಗಳ ಕಾಲ ಮಾಹಿತಿ ಪಡೆಯುವ ನೆಪದಲ್ಲಿ ಕಾಲಹರಣ ಮಾಡಿದ್ದು ಸಾರ್ವಜನಿಕರ ಕಣ್ಣು ಕೆಂಪಾಗಿಸಿದೆ. ಪೂರಕ ವ್ಯವಸ್ಥೆ ಇಲ್ಲದ ಕಾರಣವೂ ಏನೋ.. ಅಂತಿಮವಾಗಿ ಸ್ಥಳೀಯ ಯುವಕರ ಸಹಾಯ ಪಡೆದ ಇಲಾಖಾ ಸಿಬ್ಬಂದಿಗಳು ಕುಟ್ಟಿ ಬೆಂಕಿಯನ್ನು ಹತೋಟಿಗೆ ತರಲಾಯಿತು.

Related Posts

Leave a Reply

Your email address will not be published.