ಗೋ ಹತ್ಯೆ ನಿಷೇಧ ಕಾನೂನು ಹಿಂಪಡೆದರೆ ಪ್ರತಿಭಟನೆ : ಪ್ರಮೋದ್ ಮುತಾಲಿಕ್

ಕಾರ್ಕಳವನ್ನು ಕೇಂದ್ರವನ್ನಾಗಿ ಮಾಡಿ ಇಡೀ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ ರಾಜ್ಯದಲ್ಲಿ ಹಿಂದೂ ಸಂಘಟನೆ ಹಾಗೂ ಹಿಂದುಗಳಿಗೆ ವಿಶ್ವಾಸ ಬರುವ ಹಾಗೆ ಅವರ ಜೊತೆ ಇರುತ್ತೇನೆ ಹಿಂದುತ್ವದ ಹೋರಾಟದಲ್ಲಿ ಭಾಗವಹಿಸುತ್ತೇನೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.

ಅವರು ಕಾರ್ಕಳದ ತಮ್ಮ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಭ್ರಷ್ಟಾಚಾರದ ಸಂಬಂಧಪಟ್ಟದ್ದನ್ನು ಉಲ್ಲೇಖ ಮಾಡುತ್ತಾ ಬಂದಿದ್ದೇನೆ ಅದು ಅರ್ಧಕ್ಕೆ ನಿಂತಿದೆ ಅದನ್ನು ಪೂರ್ಣ ಮಾಡುತ್ತೇನೆ. ಶಾಸಕರು ವಿಜಯೋತ್ಸವ ಸಂದರ್ಭದಲ್ಲಿ ಕೆಲವೊಂದು ವಿಷಯ ಉಲ್ಲೇಖ ಮಾಡಿದ್ದಾರೆ. ಕಾಂಗ್ರೆಸ್ಸಿನ ಬಿ.ಟೀಮ್ ಹಾಗೂ ಕಾಂಗ್ರೆಸ್ ನಿಂದ ಚುನಾವಣೆಗೆ ಹಣ ಪಡೆದಿದ್ದೇವೆ ಎಂದು ಆರೋಪ ಮಾಡಿದ್ದಾರೆ. ಅವರು ಸಾಬೀತುಪಡಿಸಬೇಕು, ಇಲ್ಲದಿದ್ದರೆ ಕಾರ್ಕಳ ಮಾರಿಯಮ್ಮನ ಸನ್ನಿಧಿಗೆ ಬಂದು ಪ್ರಮಾಣ ಮಾಡಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದು ಸರ್ಕಾರ ಮಾಡುವುದರಲ್ಲಿದೆ ನಾನು ಅವರಿಗೆ ಅಭಿನಂದಿಸುತ್ತೇನೆ ಎಲ್ಲಾದರೂ ಬಜರಂಗದಳ ನಿಷೇಧ, ಗೋ ಹತ್ಯೆ ನಿಷೇಧ, ಕಾನೂನುಗಳನ್ನು ಹಿಂದೆ ಪಡೆದರೆ ನಾನು ಮತ್ತು ಶ್ರೀರಾಮ ಸೇನೆ ಕಾರ್ಯಕರ್ತರು ದೇಶಾದ್ಯಂತ ಯಾವ ರೀತಿ ಪ್ರತಿಭಟನೆ ಮಾಡುತ್ತಿವೆ ಎಂದು ಅವರಿಗೆ ಊಹಿಸಲು ಅಸಾಧ್ಯವಾಗಬಹುದೆಂದು ಗುಡುಗಿದರು. ಸುದ್ದಿಗೋಷ್ಠಿಯಲ್ಲಿ ಹರೀಶ್ ಅಧಿಕಾರಿ ವಿವೇಕಾನಂದ ಶೆಣೈ, ಮಹಿಳಾ ಅಧ್ಯಕ್ಷ ದಿವ್ಯ ನಾಯಕ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.