ಸಕಲೇಶಪುರ : 99 ವರ್ಷದ ವೃದ್ಧೆ ಸಿದ್ದಮ್ಮ ನಡೆದು ಕೊಂಡು ಬಂದು ಮತದಾನ

ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದಲ್ಲಿ ಇಂದು 90 ವರ್ಷ ಮೇಲ್ಪಟ್ಟ ವೃದ್ದೆಯರು ಮತದಾನ ಮಾಡಿದರು.
ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯ ಹಸಗವಳ್ಳಿಯ ರಂಗನಾಥ ಪ್ರೌಡಶಾಲೆಯ ಮತಗಟ್ಟೆ ಸಂಖ್ಯೆ 135 ರಲ್ಲಿ 99 ವರ್ಷದ ವೃದ್ಧೆ ಸಿದ್ದಮ್ಮ ನೆಡೆದು ಕೊಂಡು ಬಂದು ಮತದಾನ ಮಾಡಿದ್ದು ವಿಶೇಷವಾಗಿತ್ತು.

ಯಸಳೂರು ಹೋಬಳಿಯ ಚಂಗಡಹಳ್ಳಇ ಪಂಚಾಯತಿ ವ್ಯಾಪ್ತಿಯ ಬಸ್ಕಲ್ ಗ್ರಾಮದ 99 ವರ್ಷದ ವಯೋವೃದ್ಧ ಬಿಳಿಗಮ್ಮ ಮತ ಚಲಾವಣೆ ಮಾಡಿದ್ದು ವಿಶೇಷವಾಗಿತ್ತು.ಹಾಗೆ 97 ವರ್ಷದ ತಿಮ್ಮೇಗೌಡ ಎಂಬ ವೃದ ಆಲೂರು ತಾಲ್ಲೂಕು ಬೊಸ್ಮನಹಳ್ಳಿ ಮತಗಟ್ಟೆ ಸಂಖ್ಯೆ 201ರಲ್ಲಿ ತಮ್ಮ ಹಕ್ಕು ಚಲಾಯಿಸಿದರು.ಸಕಲೇಶಪುರ ನಗರದ ಸೆಂಟ್ ಆಗ್ನೇಸ ಶಾಲೆಯ ಕಾರ್ಯದರ್ಶಿ ಪ್ರಕಾಶ್ ರವರ ತಾಯಿ 96 ವರ್ಷದ ಪ್ರಶಿಂತ್ ಡಿಸೋಜ ಉರ್ದು ಶಾಲೆಯ ಮತಗಟ್ಟೆ ಸಂಖ್ಯೆ 92ರಲ್ಲಿ ವಿಲ್ ಚೇರ್ ನಲ್ಲಿ ಬಂದು ಮತದಾನ ಮಾಡಿದರು.

Related Posts

Leave a Reply

Your email address will not be published.