ಟ್ರೋಲ್ ವಾಸಣ್ಣ ಕೂಡ ಶಿವಪಾಡಿಗೆ ಬಂದರು : ಅತಿರುದ್ರ ಮಹಾಯಾಗದಲ್ಲಿ ಭಕ್ತಿಯ ನಾನಾ ರೂಪಗಳು

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಂದು ಪ್ರಾರಂಭಗೊಂಡ ‘ಅತಿರುದ್ರ ಮಹಾಯಾಗ’ ನಾಳೆ ಮಾರ್ಚ್ 05, 2023 ರಂದು ಸಂಪನ್ನಗೊಳ್ಳಲಿದೆ. ಈ ಪ್ರಯುಕ್ತ ಶಿವಪಾಡಿ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದಾರೆ. ರಾಜಕೀಯ ಗಣ್ಯರಾದ ವಿ. ಸುನೀಲ್ ಕುಮಾರ್, ಅಣ್ಣಾಮಲೈ, ತೇಜಸ್ವಿ ಸೂರ್ಯ, ನಟ ರಕ್ಷಿತ್ ಶೆಟ್ಟಿ, ಮಾಧ್ಯಮ ಗಣ್ಯರಾದ ಅಜಿತ್ ಹನುಮಕ್ಕನವರ್, ಭಾರತೀಯ ಆರೋಹಿ ಜ್ಯೋತಿ ರಾಜ್ ಮೊದಲಾದವರು ಆಗಮಿಸಿದ್ದಾರೆ. ವಿಶೇಷವೆಂಬಂತೆ ತುಮಕೂರಿನಿಂದ ಬಂದಿರುವ 100 ವರ್ಷದ ಶಿವಮ್ಮ, ನಡೆಯಲಾಗದ ವೃದ್ದರು, ಕರ್ತವ್ಯದಲ್ಲಿರುವ ಮಣಿಪಾಲದ ಪೊಲೀಸರು, ಉಡುಪಿ ಸಂತೆಕಟ್ಟೆಯ ಕೆನರಾ ಆಟೋಮೋಟಿವ್ ಶೋರೂಮ್ ಅವರು ಶಿವಪಾಡಿಯಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗಕ್ಕೆ ಆಗಮಿಸುವ ಭಕ್ತಾಭಿಮಾನಿಗಳಿಗೆ ಉಚಿತವಾಗಿ ಆಟೋ ಪಯಣವನ್ನು ಕಲ್ಪಿಸಿದ ವಿಚಾರ ಹಾಗೂ ಇನ್ನೂ ಹಲವು ವಿಚಾರಗಳಿಂದ ಶಿವಪಾಡಿಯಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗ ಭಕ್ತಿಯ ನಿದರ್ಶನವಾಗಿದೆ.



ಅಂತೆಯೇ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದ ಹನ್ನೊಂದನೇ ದಿನವಾದ ಮಾರ್ಚ್ 04, 2023 ರ ಶನಿವಾರದಂದು, ಎಲ್ಲಾ ವಿಷಯಗಳಲ್ಲೂ ವಿಭಿನ್ನವಾಗಿ ತಮ್ಮ ಅಭಿಪ್ರಾಯವನ್ನಿಟ್ಟು, ಮಾತಿನ ಮೂಲಕವೇ ಕರಾವಳಿಯಾದ್ಯಂತ ಮನೆ ಮಾತಾಗಿರುವ, ಕರಾವಳಿ ಭಾಗದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ವಾಸಣ್ಣ ಎಂದೇ ಖ್ಯಾತಿಯನ್ನು ಪಡೆದಿರುವ ಮಲ್ಪೆಯ ವಾಸು ಶಿವಪಾಡಿಯ ಅತಿರುದ್ರ ಮಹಾಯಾಗಕ್ಕೆ ಆಗಮಿಸಿದ್ದಾರೆ. ಶ್ರೀ ಉಮಾಮಹೇಶ್ವರ ದೇವರ ದರ್ಶನ ಪಡೆದು, ಭಕ್ತಿಯನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದಾರೆ.