ಮಹಿಳೆಯವರಿಗೊಂದು ಸದಾವಕಾಶ

ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ (ರಿ) ಪಚ್ಚನಾಡಿ , ಪೃಥ್ವಿ ಸ್ವಯಂ ಸೇವಕರು ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು , ಶ್ರೀ ದೇವಿ ಮಾತೃ ಮಂಡಳಿ ಪಚ್ಚನಾಡಿ ವತಿಯಿಂದ ರೋಟರಿ ಕ್ಲಬ್ ಆಫ್ ಮಂಗಳೂರು ಮತ್ತು ಯೇನಪೊಯಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಹಕಾರದಲ್ಲಿ ಮಹಿಳೆಯರ ಎಲ್ಲಾ ವಿಧದ ಕ್ಯಾನ್ಸರ್ ತಪಾಸಣೆ ಹಾಗೂ ಉಚಿತ ಚಿಕಿತ್ಸಾ ಶಿಬಿರಇದೇ ಬರುವ ದಿನಾಂಕ 07-05-2023 ರ ಆದಿತ್ಯವಾರ ಬೆಳಿಗ್ಗೆ 9.30 ಗಂಟೆಗೆ ಸರಿಯಾಗಿ ಪಚ್ಚನಾಡಿ ದೇವಿನಗರದ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ವೇದಿಕೆಯಲ್ಲಿ ಮಂಗಳೂರಿನ ಹೆಸರಾಂತ ಆಸ್ಪತ್ರೆಯಾದ ಯೇನಪೋಯ ಆಸ್ಪತ್ರೆಯ ವಿಶೇಷ ತಂತ್ರಜ್ಞಾನದ ಶುಶ್ರೂಷೆಯ ಆಧುನಿಕ ಉಪಕರಣಗಳಿರುವ ವಾಹನಗಳೊಂದಿಗೆ ತಜ್ಞ ವೈದ್ಯರ ತಂಡದಿಂದ ಮಹಿಳೆಯರಿಗಾಗಿ ಮಹಿಳೆಯರ ಎಲ್ಲಾ ವಿಧದ ಕ್ಯಾನ್ಸರ್ ತಪಾಸಣೆ ಅಲ್ಲದೆ ಅನೇಕ ಸ್ತ್ರೀ ರೋಗ ತಪಾಸಣೆಯು ಉಚಿತವಾಗಿ ನಡೆಯಲಿದೆ.
ಪಚ್ಚನಾಡಿಯಲ್ಲಿರುವ ಡಂಪಿಂಗ್ ಯಾರ್ಡ್ ನಿಂದಾಗಿ ಪಚ್ಚನಾಡಿಯ ಜನತೆಗೆ ಕ್ಯಾನ್ಸರ್ ನಂತಹ ಮಾರಕ ರೋಗಗಳು ಕಾಣಿಸಿಕೊಳ್ಳುತ್ತಿದ್ದು ಅನೇಕ ಜನರು ಕ್ಯಾನ್ಸರ್ ಬಾದೆಯಿಂದ ನರಳುತ್ತಿದ್ದಾರೆ. ಅಲ್ಲದೆ ಬೀಡಿ ಉದ್ಯಮವನ್ನೇ ನಂಬಿರುವ ಅನೇಕ ಬಡ ಸಂಸಾರಗಳು ತಂಬಾಕು ಉಪಯೋಗದಿಂದ ಕ್ಯಾನ್ಸರ್ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಹಾಗಾಗಿ ಪಚ್ಚನಾಡಿ ಹಾಗೂ ಅಸುಪಾಸಿನ ಹೆಚ್ಚಿನ ಸಂಖ್ಯೆಯ ಮಹಿಳೆಯರು ತಮ್ಮ ಆರೋಗ್ಯದ ತಪಾಸಣೆ ಮಾಡುವ ಮೂಲಕ ಈ ಉಚಿತ ಶಿಬಿರದ ಪ್ರಯೋಜನವನ್ನು ಪಡೆಯಬೇಕಾಗಿ ವಿನಂತಿ.