ಪ್ರಧಾನಿ ಮೋದಿಯವರನ್ನು ಭೇಟಿಯಾದ ಸಿದ್ದರಾಮಯ್ಯ
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮನಹುಂಡಿ ಸಿದ್ದರಾಮಯ್ಯನವರು ಇಂದು ದಿಲ್ಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾದರು. ರಾಜ್ಯದ ಬರ ಪರಿಸ್ಥಿತಿಯನ್ನು ಪ್ರಧಾನಿಯವರಿಗೆ ವಿವರಿಸಿದ ಮುಖ್ಯಮಂತ್ರಿಗಳು ರೂ. 18,177.44 ಕೋಟಿ ರೂಪಾಯಿ ತಕ್ಷಣದ ಪರಿಹಾರಕ್ಕೆ ಮನವಿ ಮಾಡಿದರು.
ಇನ್ಪುಟ್ ಸಬ್ಸಿಡಿ ರೂ. 4,663.12 ಕೋಟಿ ತುರ್ತು ಪರಿಹಾರ ರೂ. 12,577.86 ಕೋಟಿ, ಕುಡಿಯುವ ನೀರಿಗೆ ರೂ. 566.78 ಕೋಟಿ, ಜಾನುವಾರುಗಳ ಸಂರಕ್ಷಣೆಗೆ ರೂ. 363.68 ಕೋಟಿ ಹೀಗೆ ಅವುಗಳ ಹಂಚಿಕೆ ಎಂದು ಮುಖ್ಯಮಂತ್ರಿ ವಿವರ ನೀಡಿದರು.
ರಾಜ್ಯದ 223 ತಾಲೂಕುಗಳು ಬರಪೀಡಿತವಾಗಿದ್ದು, 196 ತಾಲೂಕುಗಳು ತೀವ್ರ ಬರಪೀಡಿತ ಆಗಿವೆ ಎಂದು ಅವರು ವಿವರ ನೀಡಿದರು. ಸೆಪ್ಟೆಂಬರ್‍ನಲ್ಲಿ ಬರದ ವಿವರ ನೀಡಲಾಗಿತ್ತು. ಕೇಂದ್ರ ತಂಡವೂ ಬಂದು ಪರಿಶೀಲಿಸಿತ್ತು. ಈಗ ಬರ ಪರಿಹಾರ ತುರ್ತಾಗಿ ಅಗಬೇಕಾಗಿದೆ ಎಂದು ಅವರು ಹೇಳಿದರು.