ಸುಳ್ಯ : ಪೇರಡ್ಕ ಜುಮ್ಮ ಮಸೀದಿಯಲ್ಲಿ ಈದ್ ಆಚರಣೆ

ಸುಳ್ಯ: ಪೇರಡ್ಕ ಮೋಹಿಯದ್ದಿನ್ ಜುಮಾ ಮಸ್ಜಿದ್ ನಲ್ಲಿ ನಡೆದ ಈದ್ ಪ್ರಾರ್ಥನೆಯಲ್ಲಿ ಖತೀಬ್ ಶಾಫಿ ಧಾರಿಮಿ ರಂಜಾನ್ ಪಾವಿತ್ರತೆ ಬಗ್ಗೆ ತಿಳಿ ಹೇಳಿ ದಾನ,ಧರ್ಮ,ಕುಟುಂಬ ಸಂಬಂಧ, ಸಹೋದರತೆ ಮಹತ್ವ ಬಗ್ಗೆ ತಿಳಿಸಿ ಅದಕ್ಕೆ ಹೆಚ್ಚು ಒತ್ತು ಕೊಡಬೇಕೆಂದು ಹೇಳಿ ಈದ್ ಹಬ್ಬದ ಶುಭಾಶಯ ತಿಳಿಸಿದರು.

ಜಮಾತ್ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಉಪಾಧ್ಯಕ್ಷರು ಟಿ ಬಿ ಹನೀಫ್, ಕಾರ್ಯದರ್ಶಿ ಪಿ ಕೆ ಉಮ್ಮರ್ ಗೂನಡ್ಕ, ಖಜಾಂಜಿ ಟಿ ಎ ಮೊಹಮ್ಮದ್ ಕುಂಞಿ ತೆಕ್ಕಿಲ್,ಎಂ ಆರ್ ಡಿ ಎ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಮ್ಗಾರ್, ಎಸ್ ಕೆ ಎಸ್ ಎಸ್ ಅಧ್ಯಕ್ಷರಾದ ಮುನೀರ್ ದಾರಿಮಿ ಸರಕಾರಿ ಅಧಿಕಾರಿಗಳದ ಪೊಲೀಸ್ ಇಲಾಖೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಜಾಫರ್ ಸಾದಿಕ್ ಪೇರಡ್ಕ,ಎ ಟಿ ರಝಕ್ ಗೂನಡ್ಕ,ಪೊಲೀಸ್ ರಹೂಫ್ ಶೆಟ್ಟಿಡ್ಕ, ಸಹಿತ ನೂರಾರು ಜನ ಭಾಗವಹಿಸಿದರು ನಂತರ ಖಬರ್ ಝಿಯಾರತ್,ಮಖಾಮ್ ಝಿಯಾರತ್ ನಡೆಯಿತು ಪರಸ್ಪರ ಶುಭಾಶಯ ಹಂಚಿಕೊಂಡರು.

Related Posts

Leave a Reply

Your email address will not be published.