ಸುರತ್ಕಲ್: ಸುರತ್ಕಲ್ ರೈಲ್ವೇ ಸೇತುವೆ ಅಕ್ಕಪಕ್ಕದ ರಸ್ತೆ ಗುಂಡಿ ಮುಚ್ಚುವಂತೆ ಡಿವೈಎಫ್‍ಐ ಆಗ್ರಹ

ಸುರತ್ಕಲ್ ರೈಲ್ವೇ ಸೇತುವೆ ಅಕ್ಕಪಕ್ಕದ ರಸ್ತೆ ಗುಂಡಿ ಮುಚ್ಚಿ ವಾಹನ ಸಂಚಾರಕ್ಕೆ ಯೋಗ್ಯ ರಸ್ತೆ ನಿರ್ಮಿಸಲು ಒತ್ತಾಯಿಸಿ ಹಾಗೂ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿರುವ ಕೊಂಕಣ ರೈಲ್ವೆ ರೋರೋ ಘಟಕವನ್ನು ಶೀಘ್ರ ಸ್ಥಳಾಂತರಕ್ಕೆ ಆಗ್ರಹಿಸಿ ಡಿವೈಎಫ್‍ಐ ಸುರತ್ಕಲ್ ಘಟಕದಿಂದ ಪ್ರತಿಭಟನೆ ನಡೆಸಿದರು.

ಡಿವೈಎಫ್‍ಐ ಜಿಲ್ಲಾ ಅಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಸುರತ್ಕಲ್ ಭಾಗದಲ್ಲಿ ರಸ್ತೆ ಹೊಂಡ ಗುಂಡಿಯಿಂದಾಗಿ ಅಪಾರ ಸಾವು ನೋವುಗಳ ಸಂಭವಿಸಿದೆ. ಆದರೂ ರಸ್ತೆ ಅಭಿವೃದ್ಧಿ ಪಡಿಸಲು ಪಿಡಬ್ಲ್ಯು ಇಲಾಖೆ ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಗ್ರಾಮಾಂತರ ಆಟೋ ರಿಕ್ಷಾ ಚಾಲಕರ ಸಂಘದವರು ಪ್ರತಿಭಟನೆಗೆ ಸಾಥ್ ನೀಡಿದರು.

ಪ್ರತಿಭಟನೆಯಲ್ಲಿ ಡಿವೈಎಫ್‍ಐ ಮುಖಂಡರಾದ ಶ್ರೀನಾಥ್ ಕುಲಾಲ್, ಬಿ.ಕೆ ಮಸೂದ್, ಶೈಫರ್ ಆಲಿ ಚೊಕ್ಕಬೆಟ್ಟು, ಮುಸ್ತಫಾ ಬೈಕಂಪಾಡಿ, ರಿಹಾಬ್, ಸುರತ್ಕಲ್ ಗ್ರಾಮಾಂತರ ಅಟೋ ರಿಕ್ಷಾ ಚಾಲಕರ ಸಂಘದ ಮುಖಂಡರಾದ ಅಬ್ದುಲ್ ಬಷೀರ್ ಕಾನ, ಲಕ್ಷ್ಮೀಷ ಕುಳಾಯಿ, ಸುಧೀರ್ ಕೋಡಿಕೆರೆ, ಗಣೇಶ್ ಮೈಂದಗುರಿ, ಹಂಝ ತೋಕೂರು, ಸುನಿಲ್, ಮೇಲ್ವಿನ್ ಪಿಂಟೋ, ನಾಗರಿಕ ಸಮಿತಿಯ ಜಗದೀಶ್ ಕಾನ, ಫ್ರಾನ್ಸಿಸ್ ಕಾನ, ಸಲಾಂ ಕೊಲನಿ, ಐ ಮೊಹಮ್ಮದ್, ಹನೀಫ್ ಇಡ್ಯ ಮೊದಲಾದವರು ಪಾಲ್ಗೊಂಡಿದ್ದರು.
