ಆಟಿ ತಿಂಗಳಲ್ಲಿ ತುಳು ಜನರು ಆಚರಣೆ ಮಾಡುವ ಆಟಿಡೊಂಜಿ ದಿನವನ್ನು “ಆಟಿದ ಅರಗಣೆ ” ಎಂಬ ಹೆಸರಿನಿಂದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ಮಂಗಳೂರು ಇದರ ಪ್ರಧಾನ ಕಛೇರಿಯಲ್ಲಿ ಆಚರಿಸಲಾಯಿತು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ
ವಿಟ್ಲ : ಆಟಿಯ ವೈವಿಧ್ಯಮಯ ತಿನಿಸುಗಳನ್ನು ಒಂದೇ ಬಾರಿ ತಿನ್ನುವ ಕ್ರಮ ಆಟಿಯ ಆಚರಣೆ ಅಲ್ಲ. ಆಟಿ ಒಂದು ದಿನದ ಆಚರಣೆಯೂ ಅಲ್ಲ ಅದು ಒಂದು ತಿಂಗಳ ಆಚರಣೆ. ತುಳುನಾಡಿನ ಔಷಧಿಗಳ ಮಹತ್ವವನ್ನು ತಿಳಿಯೋಣ ಎಂದು ಜನಪದ ಚಿಂತಕರು ಹಾಗೂ ಉದ್ಯಾವರ ಎಸ್ ಡಿ ಎಮ್ ಆಯುರ್ವೇದ ವೈದ್ಯಕೀಯ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಡಾ|| ವೈ.ಯನ್.ಶೆಟ್ಟಿಯವರು ಹೇಳಿದರು. ಅವರು ಮಾಣಿ ಪೆರಾಜೆಯ ವಿದ್ಯಾನಗರಪಾಳ್ಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು.30ರಂದು ನಡೆದ ಆಟಿಡೊಂಜಿ