Home Posts tagged bellare

ಬೆಳ್ಳಾರೆ ಹೋಟೆಲ್ ನಲ್ಲಿ ಆಕಸ್ಮಿಕ ಬೆಂಕಿ – ಅಪಾರ ನಷ್ಟ

ಬೆಳ್ಳಾರೆಯ ಹೋಟೆಲೊಂದರಲ್ಲಿ ಆಕಸ್ಮಿಕ ಬೆಂಕಿಯಿಂದಾಗಿ ಅಪಾರ ನಷ್ಟವಾದ ಘಟನೆ ನ.12 ರಂದು ನಡೆದಿದೆ.ಬೆಳ್ಳಾರೆ ಮುಖ್ಯರಸ್ತೆ ಸಮೀಪವಿರುವ ತೃಪ್ತಿ ಹೋಟೆಲ್ ನಲ್ಲಿ ಗ್ಯಾಸ್ ಸ್ಟವ್ ನಿಂದ ಆಕಸ್ಮಿಕ ಬೆಂಕಿ ಹತ್ತಿಕೊಂಡು ಹತ್ತಿರವಿದ್ದ ಪ್ರಿಡ್ಜ್ ಸಂಪೂರ್ಣ ಸುಟ್ಟುಹೋಗಿದೆ. ಪ್ರಿಡ್ಜ್ ಮೇಲಿದ್ದ ಎರಡು ಮೊಬೈಲ್ ಹಾಗೂ ಇನ್ನಿತರ ಹಲವು ವಸ್ತುಗಳು ಸುಟ್ಟುಹೋಗಿವೆ. ನೆರೆಕರೆಯ

ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ, ಕಡಬ ತಾಲೂಕು ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿ, ನಡೆದ ಸುಮಾರು ₹1,48,000 ಮೌಲ್ಯದ ಚಿನ್ನಾಭರಣಗಳು ಮತ್ತು ನಗದು ಹಣ ₹ 30,000/- ಸೇರಿ ಒಟ್ಟು ₹1,78,000/- ಮೌಲ್ಯದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ್ಳಾರೆ ಠಾಣೆಯಲ್ಲಿ ಅಪರಾಧ ಕ್ರಮಾಂಕ. 22/2022 ಕಲಂ 457,380 ಭಾ. ದಂ. ಸಂ ರಂತೆ ಪ್ರಕರಣ ದಾಖಲಿಸಿಕೊಂಡು, ಕಳೆದ ಎರಡು ವರ್ಷಗಳಿಂದ ತನಿಖೆ ನಡೆಸಲಾಗಿ, ಪ್ರಸ್ತುತ ಪ್ರಕರಣದ ಆರೋಪಿ ಬೆಳ್ತಂಗಡಿ ನೆರಿಯಾ

ಬೆಳ್ಳಾರೆ: ಮಹಿಳೆಯ ಶವ ಪತ್ತೆ- ಕೊಲೆ ಶಂಕೆ

ಸುಳ್ಯ: ಬೆಳ್ಳಾರೆ ಪೇಟೆಯಲ್ಲಿ ಮಹಿಳೆಯೋರ್ವರ ಶವ ಪತ್ತೆಯಾಗಿದ್ದು ಕೊಳೆ ಶಂಕೆ ವ್ಯಕ್ತವಾಗಿದೆ.ಬೆಳ್ಳಾರೆ ಪೇಟೆಯ ಎಪಿಎಂಸಿ ಮಾರುಕಟ್ಟೆ ಬಳಿ ಸೋಮವಾರ ಮಹಿಳೆಯ ಶವ ಪತ್ತೆಯಾಗಿದೆ. ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆಂಬ ಶಂಕೆ ವ್ಯಕ್ತವಾಗಿದ್ದು, ಸ್ಪಷ್ಟ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಮೃತ ಮಹಿಳೆಯನ್ನು ಪಾಟಾಜೆಯ ನಳಿನಿ ಎಂದು ಗುರುತಿಸಲಾಗಿದೆ. ಪೊಲೀಸ್ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಮಾನವೀಯತೆ ಮೆರೆದ ಬೆಳ್ಳಾರೆ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸತೀಶ್

ಸುಳ್ಯ: ಬೆಳ್ಳಾರೆ ದಿನಾಂಕ 08-04-2024 ರಂದು ಬೆಳ್ಳಾರೆ ಪೋಲಿಸ್ ( ಹೆಡ್ ಕಾನ್ಸ್ಟೇಬಲ್ ) ಸತೀಶ್ ಪುತ್ತೂರು- ಸ್ಟೇಟ್ ಬ್ಯಾಂಕ್ ಬಸ್ಸಿನಲ್ಲಿ ಬಿದ್ದು ಸಿಕ್ಕಿದ 10.000/ ನಗದು ಹಾಗೂ ದಾಖಲೆಗಳನ್ನು ಒಳಗೊಂಡ ಪ್ಲಾಸ್ಟಿಕ್ ಲಕೋಟೆಯನ್ನು ಅದರ ವಾರಾಸುದಾರ ರುಕ್ಮಯ್ಯ ಗೌಡ ಪೈಚಾರುರವರ ಮೊಬೈಲ್ ನಂ. ಸಂಗ್ರಹಿಸಿ ಠಾಣೆಗೆ ಕರೆಸಿ ಈ ದಿನ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಬೆಳ್ಳಾರೆ: ಎನ್‌ಐಎ ಅಧಿಕಾರಿಗಳಿಂದ ಮನೆಯೊಂದಕ್ಕೆ ದಾಳಿ

ಬೆಳ್ಳಾರೆ: ಎನ್‌ಐಎ ಅಧಿಕಾರಿಗಳ ತಂಡವೊಂದು ದಾಳಿ ನಡೆಸಿದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಎಣ್ಣೂರು ಸಮೀಪದ ಕುಲಾಯಿತೋಡು ಎಂಬಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ನಡೆದಿದೆ.ಎನ್‌ಐಎ ಅಧಿಕಾರಿಗಳ ತಂಡವು ಮನೆಯೊಂದಕ್ಕೆ ದಿಢೀರ್ ದಾಳಿ ಮಾಡಿದ್ದು, ಮಾಹಿತಿ ಕಲೆ ಹಾಕಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿ ನಡೆದ ದಾಳಿ ಇದಾಗಿದೆ ಎನ್ನಲಾಗಿದೆ.

ಯಶಸ್ವಿನಿ ಆರೋಗ್ಯ ವಿಮೆ ನವೀಕರಣಕ್ಕೆ ಫೆ.28 ಕೊನೆಯ ದಿನಾಂಕ

ಬೆಳ್ಳಾರೆ. ಯಶಸ್ವಿನಿ ಆರೋಗ್ಯ ವಿಮೆ ನವೀಕರಿಸಲು ಮತ್ತು ಹೊಸ ನೋಂದಣಿಗೆ 28 ಫೆಬ್ರವರಿ 2024 ಕೊನೆಯ ದಿನಾಂಕವಾಗಿರುತ್ತದೆ. *ಯಶಸ್ವಿನಿ ಆರೋಗ್ಯ ವಿಮೆ ನವೀಕರಿಸಲು ಬೇಕಾಗಿರುವ ದಾಖಲೆಗಳು:*ಎಲ್ಲಾ ನೋಂದಾಯಿತ ಸದಸ್ಯರ ಫೋಟೋ*ಹೊಸ ಸದಸ್ಯರ ಸೇರ್ಪಡೆ ಇದ್ದಲ್ಲಿ ಅವರ ಆಧಾರ್ ಪ್ರತಿ ಹಾಗೂ ರೇಷನ್ ಕಾರ್ಡು ಪ್ರತಿ*ಹೊಸ ನೋಂದಣಿಗೆ ಬೇಕಾಗುವ ದಾಖಲೆಗಳು*ರೇಷನ್ ಕಾರ್ಡು ಪ್ರತಿ*ಎಲ್ಲಾ ನೊಂದಾಯಿಸುವ ಸದಸ್ಯರ ಆಧಾರ್ ಕಾರ್ಡು ಪ್ರತಿ*ಎಲ್ಲಾ ನೊಂದಾಯಿಸುವ ಸದಸ್ಯರ