ರಥ ಯಾತ್ರೆಯ ಮೂಲಕ ಬಿಜೆಪಿಯನ್ನು ರಾಷ್ಟ್ರ ಮಟ್ಟಕ್ಕೆ ಏರಿಸಿದ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿಯವರಿಗೆ ಭಾರತ ರತ್ನ ಗೌರವ ಸಲ್ಲುತ್ತಿರುವುದಾಗಿ ಇಂದು ಪ್ರಧಾನಿ ಮೋದಿಯವರು ಅಡ್ವಾಣಿಯವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ತಿಳಿಸಿದರು.ರಾಮ ಮಂದಿರ ಹೋರಾಟದ ಮುಖ್ಯ ರೂವಾರಿಯಾಗಿದ್ದರು ಅಡ್ವಾಣಿ. 1977ರ ಜನತಾ ಸರಕಾರದಲ್ಲಿ ಮತ್ತು ವಾಜಪೇಯಿಯವರ ಸಂಪುಟದಲ್ಲಿ
ಕಲ್ಲಡ್ಕ ಶ್ರೀ ರಾಮ ಮಂದಿರದಲ್ಲಿ ವಿದ್ಯಾಗಣಪತಿ ದೇವರ ಪ್ರತಿಷ್ಠೆಯ ಅಂಗವಾಗಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಅವಧೂತ ವಿನಯ ಗುರೂಜಿ, ಕಲ್ಲಡ್ಕ ಪ್ರಭಾಕರ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಎಂಟು ತಿಂಗಳ ಹಿಂದೆ ವಿಧಾನ ಸಭಾ ಚುನಾವಣೆಯ ಕಾಲದಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಸೇರಿದ್ದಾರೆ, ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಕಾಂಗ್ರೆಸ್ಸಿನಿಂದ ಟಿಕೆಟ್ ಕೊಡುತ್ತಾರೆ ಎಂದು ವಿಧಾನ ಪರಿಷತ್ ಚುನಾವಣೆಯ ಕಾಲದಲ್ಲಿ ಕಾಂಗ್ರೆಸ್ ಸೇರಿದ್ದರು. ಆದರೆ ಚುನಾವಣೆಯಲ್ಲಿ ಸೋತರು. ಆದ್ದರಿಂದ ಅವರನ್ನು ಅನಂತರ ಮೇಲ್ಮನೆಗೆ ಕಳುಹಿಸಿತು.ಬಿಜೆಪಿಯಲ್ಲಿ ಶಾಸಕ, ಮಂತ್ರಿ,
ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಮರಳುತ್ತಾರೆ ಎಂಬ ನಿರೀಕ್ಷೆ ಇತ್ತು. ನಮ್ಮ ಸಿದ್ದಾಂತದ ಜೊತೆ ಸುದೀರ್ಘಕಾಲ ಗುರುತಿಸಿಕೊಂಡಿದ್ದವರು. ಶೆಟ್ಟರ್ ಅವರಂತಹ ಸೈದ್ಧಾಂತಿಕ ಹಿನ್ನೆಲೆಯವರಿಗೆ ಬೇರೆ ಪಕ್ಷ ಒಗ್ಗಿಕೊಳ್ಳಲು ಕಷ್ಟ. ಪಕ್ಷದ ಶಕ್ತಿ ವೃದ್ಧಿಯಾಗುತ್ತದೆ ಎಂಬ ವಿಶ್ವಾಸವಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಉಡುಪಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಗದೀಶ್ ಶೆಟ್ಟರ್ ಮರು ಸೇರ್ಪಡೆಯಿಂದ
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ಇಡೀ ದೇಶದಲ್ಲೂ ರಾಮಮಂದಿರದ ಉದ್ಘಾಟನೆ ಸಂಭ್ರಮ ಮನೆ ಮಾಡಿದೆ. ರಾಮಲಲ್ಲಾ ಪ್ರತಿಷ್ಠಾಪನೆಯ ಸಂಭ್ರಮದಲ್ಲಿ ಭಾಗಿಯಾಗಲು ಮಂಗಳೂರಿನಿಂದ ಬಿಜೆಪಿಯ ಜಿಲ್ಲಾ ಕೋಶಾಧಿಕಾರಿ ಜಿತೇಂದ್ರ ಕೊಟ್ಟಾರಿಯವರೂ ತೆರಳಿದ್ದಾರೆ. ಅವರ ಜೊತೆಗೆ ಡಾ. ಡಿ ವಿರೇಂದ್ರ ಹೆಗ್ಗಡೆ, ಡಾ. ಕಲ್ಲಡ್ಕ ಪ್ರಭಾಕರ್ ಭಟ್, ನಿಟ್ಟೆ ಸಂಸ್ಥೆಯ ವಿಶಾಲ್ ಹೆಗ್ಡೆ, ಎಂ.ಬಿ. ಪುರಾಣಿಕ್ ದಂಪತಿ, ಸೇರಿದಂತೆ ಜಿಲ್ಲೆಯ ಎಲ್ಲಾ
ಬಿಜೆಪಿಯ ಮಾಜೀ ಶಾಸಕ ಗೂಳಿಹಟ್ಟಿ ಶೇಖರ್ ಅವರು ನಾಗಪುರದ ಸಂಘ ಕೇಂದ್ರದ ಹೆಡಗೇವಾರ್ ವಸ್ತು ಸಂಗ್ರಹಾಲಯಕ್ಕೆ ದಲಿತ ಎಂದು ನನಗೆ ಪ್ರವೇಶ ಕೊಡಲಿಲ್ಲ ಎಂದು ದೂರಿದ್ದಾರೆ. ಅದೇ ಸಮಯದಲ್ಲಿ ಚುನಾವಣೆ ನಡೆದ ರಾಜ್ಯಗಳಲ್ಲಿ ಹೆಚ್ಚು ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿರುವುದು ವರದಿಯಾಗಿದೆ. ಇವೆಲ್ಲ ಒಳ ವೈರುಧ್ಯದ ವಿಷಯಗಳು. ಇದಕ್ಕೆ ಸಂವಾದಿಯಾಗಿ ಬಿಜೆಪಿ ಆಡಳಿತದಲ್ಲಿ ಮಹಿಳೆಯರು ಮತ್ತು ದಲಿತರ ಮೇಲೆ ಹಲ್ಲೆ ಹೆಚ್ಚಾಗಿರುವುದಾಗಿಯೂ ವರದಿಯಾಗಿದೆ. ಅದಕ್ಕೆ
ನನ್ನನ್ನು ಗಡಿಪಾರು ಮಾಡುವುದಕ್ಕೆ ಮೊದಲು ನೀನು ಗಡಿಪಾರು ಆಗುವುದರಿಂದ ರಕ್ಷಿಸಿಕೋ ಎಂದು ಮಾಜೀ ಸಚಿವ ಬಿ. ಕೆ. ಹರಿಪ್ರಸಾದ್ ಅವರು ಮತ್ತೊಬ್ಬ ಮಾಜೀ ಮಂತ್ರಿ ಶ್ರೀರಾಮುಲುಗೆ ಎಚ್ಚರಿಕೆ ನೀಡಿದ್ದಾರೆ. ರಾಮುಲು ಅವರೆ ನೀವು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಹಲವು ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ಬರೆದು ಹೇಳಿದ್ದೀರಿ. ಕಳ್ಳ ಗಣಿಗಾರಿಕೆ ಮಾಡಿ, ತೆರಿಗೆ ವಂಚಿಸಿ ದೇಶದ್ರೋಹ ಮಾಡಿದ್ದೀರಿ. ನಿಮ್ಮ ಗೃಹ ಮಂತ್ರಿ ಅಮಿತ್ ಶಾರನ್ನು ಕೋರ್ಟು
ಆರೆಸ್ಸೆಸ್ ರಾಷ್ಟ್ರೀಯ ಕಚೇರಿ ಇರುವ ನಾಗಪುರ ವಲಯದಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಈ ಜಿಲ್ಲೆಯ ಹದಿಮೂರು ಪಂಚಾಯತು ಸಮಿತಿಗಳಲ್ಲಿ ಒಂಬತ್ತರ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.ಮೂರು ಪಂಚಾಯತು ಸಮಿತಿಗಳು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ಸಿಕಿದೆ. ಒಂದರಲ್ಲಿ ಶಿವಸೇನೆಯ ಭಿನ್ನಮತೀಯ ಬಣವು ಅಧ್ಯಕ್ಷತೆಯನ್ನು ಗೆದ್ದಿದೆ. ಬಿಜೆಪಿ ಒಂದರಲ್ಲೂ ಅಧ್ಯಕ್ಷ ಸ್ಥಾನ ಗೆಲ್ಲಲು ವಿಫಲವಾಗಿದೆ. ಮೈತ್ರಿ ಕಾರಣಕ್ಕೆ ಎರಡು ಕಡೆ
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿಯ ವಿಶ್ವನಾಥ್ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಅಶೋಕ್‍ರನ್ನು ಬಕೆಟ್ ಹಿಡಿದುಕೊಂಡೇ ರಾಜಕೀಯ ಮಾಡುವವರು ಎಂದು ಟೀಕಿಸಿರುವುದು ಬಿಜೆಪಿಯ ಬಕೆಟ್ ರಾಜಕೀಯವನ್ನು ಬಹಿರಂಗಗೊಳಿಸಿದೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷ ಗೇಲಿ ಮಾಡಿದೆ. ಬಿಜೆಪಿಯ ಎಸ್. ಆರ್. ವಿಶ್ವನಾಥ್ ಹೇಳಿಕೆಯನ್ನು ಪ್ರಸ್ತಾಪಿಸಿ, ಅಶೋಕ್ ಅವರೆ ಪ್ರತಿಪಕ್ಷದ ನಾಯಕ ಸ್ಥಾನ ಹಿಡಿಯಲು ಯಾರಿಗೆ ಬಕೆಟ್ ಹಿಡಿದಿರಿ
ನಾಲ್ಕು ರಾಜ್ಯಗಳ ಚುನಾವಣೆಯ ಫಲಿತಾಂಶ ಬಿಜೆಪಿಗೆ ಲಾಭ ನೀಡಿದೆ. ಕಾಂಗ್ರೆಸ್ ಬಲ ನಿಂತ ನೀರಾಗಿದೆ. ಭಾರತ, ಇಂಡಿಯಾಗಳು ಸೋತು ಹೋಗಿವೆ. ಬಿಜೆಪಿಯಯ 142 ಹೆಚ್ಚು ಶಾಸಕರನ್ನು ಗೆದ್ದಿದೆ. ನಾಲ್ಕು ರಾಜ್ಯಗಳಲ್ಲೂ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಪಡೆದಿದೆ. ಕಾಂಗ್ರೆಸ್ ಮತ ಭಾರ ಭಾರೀ ಇಳಿಯದಿದ್ದರೂ ಒಟ್ಟು 66 ಶಾಸಕರನ್ನು ಕಳೆದುಕೊಂಡಿದೆ. ತೆಲಂಗಾಣದಲ್ಲಿ ಮಾತ್ರ ಅದು ತನ್ನ ಶಾಸಕ ಸಂಖ್ಯೆ ಹೆಚ್ಚಿಸಿಕೊಂಡು ಮೂರು ರಾಜ್ಯಗಳ ಕೊರತೆಯನ್ನು ಸ್ವಲ್ಪ ಭರ್ತಿ