ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಅವರು ನಾಮಪತ್ರ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ಮಹಿಳೆಯರು, ತಾಯಂದಿರ ಬೆಂಬಲದ ಸಂಕೇತವಾಗಿ ಚುನಾವಣಾ ಠೇವಣಿಯ ಮೊತ್ತಕ್ಕೆ ಕಿರು ದೇಣಿಗೆಗಳನ್ನು ಸಲ್ಲಿಸಲಾಯಿತು. ಪಕ್ಷದ ಚುನಾವಣಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಕ್ಯಾ. ಚೌಟರಿಗೆ ಮಹಿಳೆಯರು ಆರತಿ ಎತ್ತಿ,
ಈ ಬಾರಿಯ ವಿಧಾನಸಭೆ ಚುನಾವಣೆಗೆ ನಾನು ಯಾವುದೇ ಕ್ಷೇತ್ರದಿಂದಲೂ ಟಿಕೇಟ್ ಆಕಾಂಕ್ಷಿಯಾಗಿರುವುದಿಲ್ಲ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್.ಗಣೇಶ್ ಕಾರ್ಣಿಕ್ ಅವರು ತಿಳಿಸಿದ್ದಾರೆ. ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಗಣೇಶ್ ಕಾರ್ಣಿಕ್ ಅವರ ಹೆಸರು ಇದೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸುದ್ಧಿಗೆ ಅವರು ಪತ್ರಿಕ್ರಿಯಿಸಿ ನಾನು ಯಾವುದೇ ಕ್ಷೇತ್ರದಿಂದಲೂ ಟಿಕೆಟ್ ಆಕಾಂಕ್ಷಿಯಾಗಿರುವುದಿಲ್ಲ ಎಂದು ಸ್ವಷ್ಟಪಡಿಸಿದರು