Home Posts tagged #udupi krishna mata

ಶ್ರೀ ಕೃಷ್ಣ ಮಠದಲ್ಲಿ ಮೊದಲ ಬಾರಿಗೆ ಐದು ರಥಗಳ ಮಹೋತ್ಸವ

ಉಡುಪಿಯಲ್ಲಿ ರಾಮ ಪ್ರತಿಷ್ಠಾ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಶ್ರೀ ಕೃಷ್ಣ ಮಠದಲ್ಲಿ ಇದೇ ಮೊದಲ ಬಾರಿಗೆ ಐದು ರಥಗಳ ಮಹೋತ್ಸವ ನಡೆಯಿತು. ಬ್ರಹ್ಮರಥ, ಚಿನ್ನದ ರಥ ಮಹಾಪೂಜಾ ರಥ, ಬೆಳ್ಳಿರಥ ಹಾಗೂ ನವರತ್ನ ರಥವನ್ನು ರಥ ಬೀದಿಗೆ ಪ್ರದಕ್ಷಿಣೆ ತರಲಾಯಿತು ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ರಾತ್ರಿ ನಡೆದ ಉತ್ಸವದಲ್ಲಿ ರಾಮಾಯಣ ಸಹಿತ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಅಕ್ಕಿ ಮುಹೂರ್ತ : 2024 ರ ಪರ್ಯಾಯಕ್ಕೆ ಸಜ್ಜು

ದಿನ ಕಳೆದಂತೆ ಹತ್ತಿರವಾಗುತ್ತಿದೆ ಉಡುಪಿಯ ಭವ್ಯ ಆಚರಣೆ. ಇಡೀ ಜಗತ್ತಿನಲ್ಲೇ ವಿಶಿಷ್ಟವಾದ ಸಂಪ್ರದಾಯಗಳಲ್ಲಿ ಒಂದು, ಶತಮಾನಗಳಿಂದ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಚಾಚೂ ತಪ್ಪದೇ ಆಚರಿಸಿಕೊಂಡು ಬರುತ್ತಿರುವ “ಪರ್ಯಾಯ”ಮಹೋತ್ಸವ. ಉಡುಪಿಯ 8 ಮಠಗಳ ನಡುವೆ ಶ್ರೀ ಕೃಷ್ಣ ದೇವಾಲಯದ ಜವಾಬ್ದಾರಿಗಳ ಹಸ್ತಾಂತರವನ್ನೇ ಪರ್ಯಾಯ ಮಹೋತ್ಸವ ಎನ್ನುತ್ತಾರೆ. ಪ್ರಸ್ತುತ ಕೃಷ್ಣಪುರ ಮಠದ ವಿದ್ಯಾಸಾಗರ ತೀರ್ಥರು ಶ್ರೀ ಕೃಷ್ಣನ ಆರಾಧನೆಯಲ್ಲಿ ತೊಡಗಿದ್ದರೆ, ಮುಂದಿನ ಸರದಿಯಲ್ಲಿ

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ದ ಭೇಟಿ

ಉಡುಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ದ ಇಂದು ಬೆಳಗ್ಗೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಮಠಕ್ಕೆ ಆಗಮಿಸಿದ ನಡ್ದಾ ಅವರನ್ನು ಮಠದ ದಿವಾನ ವರದರಾಜ ಆಚಾರ್ಯ ಮಾಲಾರ್ಪಣೆಗೈದು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಸುನಿಲ್ ಕುಮಾರ್ ಮುಖಂಡರಾದ ಪ್ರದೀಪ ರಾವ್, ಸುಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಜೆಪಿ ನಡ್ದಾ

ಕರಾವಳಿಯಾದ್ಯಂತ ದೀಪಾವಳಿ ಸಡಗರ : ಕೃಷ್ಣಮಠದಲ್ಲಿ ಬಲೀಂದ್ರ ಪೂಜೆ

ಶ್ರೀಕೃಷ್ಣಮಠದಲ್ಲಿ ದೀಪಾವಳಿಯ ಅಮಾವಾಸ್ಯೆ ಪ್ರಯುಕ್ತ ಸೋಮವಾರ ರಾತ್ರಿ ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು, ಅದಮಾರು ಕಿರಿಯ ಶ್ರೀಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯರು “ಬಲೀಂದ್ರ ಪೂಜೆ” ನಡೆಸಿದರು. ಬಳಿಕ ಪಂಚ ದೀಪ ಪ್ರಜ್ವಲನೆಯೊಂದಿಗೆ ವಾದ್ಯ ಮೇಳ ಸಹಿತ ಶ್ರೀಕೃಷ್ಣ ಮಠದ ಎಲ್ಲ ಪ್ರದೇಶ ಮತ್ತು ಪರ್ಯಾಯ ಕೃಷ್ಣಾಪುರ ಮಠಕ್ಕೂ

ಉಡುಪಿಯಲ್ಲಿ ಸರಳವಾಗಿ ಶ್ರೀಕೃಷ್ಣ ಜನ್ಮಾಷ್ಠಮಿ

ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆ ಮಾಡಿದೆ.ಶ್ರೀ ಕೃಷ್ಣ ಮಠದಲ್ಲಿ ಕೊವಿಡ್ ನಿಯಮಾವಳಿ ಅನುಸರಿಸಿ ಸರಳವಾಗಿ ಜನ್ಮಾಷ್ಟಮಿ ಅಚರಿಸಲಾಯಿತು. ಪರ್ಯಾಯ ಶ್ರೀಪಾದರಿಂದ ಶ್ರೀ ಕೃಷ್ಣ ದೇವರನ್ನು ವಿಶೇಷವಾಗಿ ಅಲಂಕರಿಸಿ, ತುಳಸಿ ಅರ್ಚನೆಯನ್ನು ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪರ್ಯಾಯ ಶ್ರೀ ಈಶ ಪ್ರಿಯರು, ಅದಮಾರು ಹಿರಿಯ ಶ್ರೀ ಗಳಾದ ವಿಶ್ವ ಪ್ರಿಯ ಶ್ರೀಪಾದರು, ಕೃಷ್ಣಪುರ ಮಠದ ವಿದ್ಯಾ ಸಾಗರ ಶ್ರೀಪಾದರು, ಕಾಣಿಯೂರು ಮಠದ ವಿಶ್ವ ವಲ್ಲಭ ಶ್ರೀ