Home Posts tagged #v4news karnataka (Page 76)

ಉಡವೊಂದನ್ನು ಬೇಟೆಯಾಡಿದ ಬೃಹತ್ ಗಾತ್ರದ ಕಾಳಿಂಗ ಸರ್ಪ

ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಕಡಂಬು ಎಂಬಲ್ಲಿ ಯುವ ಉದ್ಯಮಿ ಶಶಿರಾಜ್ ಶೆಟ್ಟಿ ಅವರ ಮನೆಯ ಹಿಂಭಾಗ ಉಡವೊಂದನ್ನು ಬೇಟೆಯಾಡಿದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನು ಸೆರೆ ಹಿಡಿಯಲಾಯಿತು. ಉದ್ಯಮಿ ಶಶಿರಾಜ್ ಶೆಟ್ಟಿ ಯವರ ಮನೆಯ ಹಿಂಭಾಗದಲ್ಲಿ ದೊಡ್ಡ ಗಾತ್ರದ ಉಡವನ್ನು ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಬೇಟೆಯಾಡುವುದನ್ನು ಗಮನಿಸಿ ಸ್ನೇಕ್ ಅಶೋಕ್

ಮಂಗಳೂರಿನಲ್ಲಿ ‘ಕೆಂಗಣ್ಣು ಸಮಸ್ಯೆ

ಮಂಗಳೂರು : ಅವಿಭಜಿತ ಕರಾವಳಿ ಜಿಲ್ಲೆಯಲ್ಲಿ ಕಣ್ಣು ನೋವು ( ಕೆಂಗಣ್ಣು) ಸಮಸ್ಯೆ ಹೆಚ್ಚಾಗಿದ್ದು, ಕಣ್ಣು ಆಸ್ಪತ್ರೆಗಳಲ್ಲಿ ದಿನದಿಂದ ದಿನಕ್ಕೆ ಇಂತಹ ಸಮಸ್ಯೆಗಳ ಸರತಿ ಸಾಲು ಉದ್ದವಾಗುತ್ತಿದೆ. ಮಕ್ಕಳಾದರೆ ಶಾಲೆಗೆ ಬರಬೇಡಿ ದೊಡ್ಡವರಾದರೆ ಕಚೇರಿಗೆ ಬರಬೇಡಿ ಎಂದು ಬೇಡುವ ಸ್ಥಿತಿ ಉದ್ಭವಾಗಿದೆ. ಎಲ್ಲಕ್ಕೂ ಹವಾಮಾನ ವೈಪರೀತ್ಯವೇ ಕಾರಣ ಎನ್ನುವುದು ಆರೋಗ್ಯ ತಜ್ಞರ ಮಾತು.ಇದು ಕಣ್ಣು ನೋವು (ಮದ್ರಾಸ್‌ ಐ) ಬರುವ ಸಮಯವಲ್ಲ. ಹೆಚ್ಚಾಗಿ ಮಾನ್ಸೂನ್‌ ಸಮಯದಲ್ಲಿ

ಮಧುಮೇಹ ಆರೋಗ್ಯ ಜಾಗೃತಿ ಪ್ರದರ್ಶನ ಮತ್ತು ಉಚಿತ ಮಧುಮೇಹ ತಪಾಸಣಾ ಶಿಬಿರ ಹಾಗೂ ರೋಗಿಗಳ ಮಧುಮೇಹ ಸ್ವಯಂ ನಿರ್ವಹಣಾ ಡೈರಿ ಬಿಡುಗಡೆ

ಮಣಿಪಾಲ, 14 ನವೆಂಬರ್ 2022: ಪ್ರತಿ ವರ್ಷ ನವೆಂಬರ್ 14 ಅನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ. ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಅಂತಃಸ್ರಾವಶಾಸ್ತ್ರ ವಿಭಾಗವು 14ನೇ ನವೆಂಬರ್ 2022 ಸೋಮವಾರದಂದು ಬೃಹತ್ ಮಧುಮೇಹ ಆರೋಗ್ಯ ಜಾಗೃತಿ ಪ್ರದರ್ಶನ ಮತ್ತು ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು. ಈ ವರ್ಷದ ದ್ಯೇಯ ವಾಕ್ಯ “ನಾಳೆಯನ್ನು ರಕ್ಷಿಸಲು ಮದುಮೇಹ ಶಿಕ್ಷಣ”. ವಿಶ್ವ ಮಧುಮೇಹ ದಿನವು ಮಧುಮೇಹವನ್ನು ಜಾಗತಿಕ

ಬಂಟ್ವಾಳ : ಸಿಡಿಲಿನ ಅಘಾತಕ್ಕೆ ಬಾಲಕನೋರ್ವ ಬಲಿ

ಬಂಟ್ವಾಳ : ಸಿಡಿಲಿನ ಅಘಾತಕ್ಕೆ ಬಾಲಕನೋರ್ವ ಬಲಿಯಾದ ಘಟನೆ ಬಂಟ್ವಾಳ ಕರಿಯಂಗಳ ಗ್ರಾಮದಲ್ಲಿ  ನಡೆದಿದೆ. ಸಾಣೂರುಪದವು ಗಣೇಶ್ ಆದಿದ್ರಾವಿಡ ಅವರ ಪುತ್ರ 16 ವರ್ಷದ ಕಾರ್ತಿಕ್ ಸಿಡಿಲು ಬಡಿದು ಮೃತಪಟ್ಟ ದುರ್ದೈವಿ.ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಿನ್ನೆ ರಾತ್ರಿ ಭಾರೀ  ಮಳೆ ಸುರಿದಿದ್ದು ರಾತ್ರಿ ಮನೆಯಲ್ಲಿ ಇರುವ ಎಲ್ಲರೂ 9 ರ ಸುಮಾರಿಗೆ ಊಟ ಮುಗಿಸಿ ಮಲಗಿದ್ದು ಈ ವೇಳೆ  ಸಿಡಿಲು ಸಹಿತ ಮಳೆ ಬಂದು, ಮಲಗಿದ್ದವರಿಗೆ ಕರೆಂಟ್ ಶಾಕ್ ಹೊಡೆದ

ರಾಜ್ಯದಲ್ಲಿ 3 ದಿನ ಭಾರೀ ಮಳೆ : ಭಾರತೀಯ ಹವಾಮಾನ ಇಲಾಖೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ 3 ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಂದು ಕರಾವಳಿಯ ಹಲವು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆ ಹೆಚ್ಚು ಮಳೆಯಾಗಲಿದೆ. ಕರ್ನಾಟಕದ ಉತ್ತರ ಒಳನಾಡು, ಮಲೆನಾಡು, ಕರಾವಳಿ ಭಾಗಗಳಲ್ಲಿ ನ. 17ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಧಾರವಾಡ, ಗದಗ,

ಸುರತ್ಕಲ್ ಟೋಲ್ ಗೇಟ್ ರದ್ದು ಬದಲು ವಿಲೀನ! ಹೆದ್ದಾರಿ ಪ್ರಾಧಿಕಾರದ ನಾಟಕೀಯ ಆದೇಶ, ಹೆಜಮಾಡಿಯಲ್ಲಿ ಕಟ್ಟಬೇಕು ಡಬಲ್ ಶುಲ್ಕ

ಮಂಗಳೂರು, : ಸುರತ್ಕಲ್ ಟೋಲ್ ಗೇಟ್ ರದ್ದಾಗಬೇಕು ಎಂದು ಹೋರಾಟ ನಡೆಸಿದ್ದ ಜನಸಾಮಾನ್ಯರಿಗೆ ಮತ್ತೆ ಕುತ್ತಿಗೆ ಹಿಡಿಯುವ ರೀತಿಯ ಆದೇಶವನ್ನು ಹೆದ್ದಾರಿ ಪ್ರಾಧಿಕಾರ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನ.11ರಂದು ಈ ಬಗ್ಗೆ ಆದೇಶ ಹೊರಡಿಸಲಾಗಿದ್ದು ನಂತೂರಿನಿಂದ ಸುರತ್ಕಲ್ ವರೆಗಿನ ರಸ್ತೆಯ ಟೋಲ್ ಶುಲ್ಕವನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿ ಹೆಚ್ಚುವರಿಯಾಗಿ ಸಂಗ್ರಹಿಸಲು ಆದೇಶ ನೀಡಿದೆ. ತಲಪಾಡಿಯಿಂದ ಕುಂದಾಪುರದ ವರೆಗಿನ ರಸ್ತೆಯನ್ನು ನವಯುಗ

ಆಟೋ ಚಾಲಕನ ಮೇಲೆ ದುಷ್ಕರ್ಮಿಗಳಿಂದ ತಲವಾರು ದಾಳಿ

ಬಂಟ್ವಾಳ : ಆಟೋ ಚಾಲಕನೋರ್ವನನ್ನು ದುಷ್ಕರ್ಮಿಗಳು ಹತ್ಯೆ ಮಾಡಲು ಯತ್ನಿಸಿದ ಘಟನೆ ಬಂಟ್ವಾಳದ ವಿಟ್ಲದ ಬೋಳಂತೂರು ಸಮೀಪದ ನಾಡಾಜೆ ಎಂಬಲ್ಲಿ ನಡೆದಿದೆ. ಬೋಳಂತೂರು ಸಮೀಪದ ಗುಳಿ ನಿವಾಸಿಯಾಗಿರುವ ಅಬೂಬಕ್ಕರ್ ಎಂಬವರ ಪುತ್ರ ಆಟೋ ಚಾಲಕ ಶಾಕೀರ್ (30) ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಯುವಕ. ನಿನ್ನೆ ರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಕಬಡ್ಡಿ ಮ್ಯಾಚ್ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಶಾಕೀರ್‍ನನ್ನು ಬೋಳಂತೂರು ಸಮೀಪದ ನಾಡಾಜೆ ರಸ್ತೆಯಲ್ಲಿ ತಡೆದು

ಕನ್ನಡದಲ್ಲೇ ವ್ಯವಹರಿಸಲು ಮನವಿ

ಕನ್ನಡ ನೆಲ, ಜಲ ಭಾಷೆ, ಸಂಸ್ಕೃತಿ ಮತ್ತು ಸಂಸ್ಕಾರ ಉಳಿಸುವಲ್ಲಿ ಕಸಾಪ ಬಹುಮುಖ್ಯ ಭೂಮಿಕೆ ವಹಿಸುತ್ತಿದೆ : ಡಾ ಚೂಂತಾರುಕನ್ನಡ ನಾಡಲ್ಲಿ ಎಲ್ಲರೂ ಕನ್ನಡದಲ್ಲಿಯೇ ವ್ಯವಹರಿಸುವಂತಾಗಬೇಕು. ಇತರ ರಾಜ್ಯದ ನೌಕರರು ನಮ್ಮ ರಾಜ್ಯದಲ್ಲಿ ಕೆಲಸ ಮಾಡುವಾಗ ಕನ್ನಡ ಭಾಷೆ ಕಲಿತು ಇಲ್ಲಿನ ಜನರೊಂದಿಗೆ ವ್ಯವಹರಿಸಬೇಕಾಗುತ್ತದೆ. ಕನ್ನಡ ಭಾಷೆಯಲ್ಲಿ ವ್ಯವಹರಿಸಿದರೆ ಇಲ್ಲಿಯ ಕನ್ನಡಿಗರ ಮನಸ್ಸನ್ನು ಗೆಲ್ಲಲು ಸಾಧ್ಯವಿದೆ ಎಂದು ಕಸಾಪ ನ ಗೌರವ ಕಾರ್ಯದರ್ಶಿ ಡಾ|| ಮುರಲೀ ಮೋಹನ್

ಜೆಸಿಐ ಬಂಟ್ವಾಳದ 2023ನೇ ಸಾಲಿನ ನೂತನ ಅಧ್ಯಕ್ಷರಾಗಿ ಛಾಯಾಗ್ರಾಹಕ ರಾಜೇಂದ್ರ ಅವರು ಆಯ್ಕೆ

ಬಂಟ್ವಾಳ: ಜೆಸಿಐ ಬಂಟ್ವಾಳದ 2023ನೇ ಸಾಲಿನ ನೂತನ ಅಧ್ಯಕ್ಷರಾಗಿ ಬಿ.ಸಿ. ರೋಡಿನ ವರ್ಣ ಸ್ಟುಡಿಯೋದ ಮಾಲಕ, ಸೃಜನಶೀಲ ಛಾಯಾಗ್ರಾಹಕ ರಾಜೇಂದ್ರ ಅವರು ಆಯ್ಕೆಯಾಗಿದ್ದಾರೆ. ಜೆಸಿಐ ಬಂಟ್ವಾಳದ ಅಧ್ಯಕ್ಷ ರೋಷನ್‌ರೈ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಮಾಸಿಕ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ನೂತನ ಕಾರ್ಯದರ್ಶಿಯಾಗಿ ರಶ್ಮಿ ವಚನ್ ಶೆಟ್ಟಿ, ಕೋಶಾಧಿಕಾರಿಯಾಗಿ ಶ್ರೀನಿವಾಸ್ ಹಾಗೂ ವಿವಿಧ ವಿಭಾಗಗಳ ಉಪಾಧ್ಯಕ್ಷರಾಗಿ ಗಣೇಶ್ ಕುಲಾಲ್, ಕಿರಣ್, ಮನೋಜ್ ಕನಪಾಡಿ, ವಚನ್

ಉಳ್ಳಾಲ : ಬಸ್ ಕ್ಲೀನರ್ ನಿಂದ ವೈದ್ಯೆಯೊಂದಿಗೆ ಅಸಭ್ಯ ವರ್ತನೆ

ಉಳ್ಳಾಲ: ಬೆಂಗಳೂರು ನಿಂದ ಮಂಗಳೂರಿಗೆ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕೆಗೆ ಬಸ್ ಕ್ಲೀನರ್ ವೊಬ್ಬ ಪ್ಯಾಂಟ್ ನ ಜಿಪ್ ಓಪನ್ ಮಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ. ಘಟನೆ ವಿವರ: ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕರ್ತವ್ಯ ದಲ್ಲಿರುವ ಮಹಿಳಾ ವೈದ್ಯೆಯೊಬ್ಬರು ಬೆಂಗಳೂರಿನಿಂದ ಮಂಗಳೂರಿಗೆ ಐಡಿಯಲ್ (KA51 AB 3649) ಬಸ್‌ನಲ್ಲಿ ಪ್ರಯಾಣ