ತೆಂಕಮಿಜಾರು ಗ್ರಾ.ಪಂ: ವಿಶೇಷ ಚೇತನರಿಗೆ ಚೆಕ್ ವಿತರಣೆ
ಮೂಡುಬಿದಿರೆ: ತೆಂಕಮಿಜಾರು ಗ್ರಾ.ಪಂಚಾಯತ್ ನಲ್ಲಿ ಮಂಗಳವಾರ 2023-24ನೇ ಸಾಲಿನ ವಿಶೇಷ ಚೇತನರ ಸಮನ್ವಯ ಗ್ರಾಮಸಭೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಗ್ರಾ.ಪಂ.ಅಧ್ಯಕ್ಷೆ ಶಾಲಿನಿ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ 49 ಮಂದಿ ವಿಶೇಷಚೇತನರಿಗೆ ತಲಾ 2000ದಂತೆ ರೂ 98000 ಚೆಕ್ಕನ್ನು ವಿತರಿಸಲಾಯಿತು.
ವೆನ್ ಲಾಕ್ ಆಸ್ಪತ್ರೆಯ ಎಂಆರ್ ಡಬ್ಲ್ಯೂ ಜಯಪ್ರಕಾಶ್ ವಿಶೇಷ ಚೇತನರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ, ಪಂಚಾಯತ್ ಸದಸ್ಯರು ಮತ್ತು ಸಿಬಂದಿಗಳು ಈ ಸಂದರ್ಭದಲ್ಲಿದ್ದರು.