ಉಡುಪಿ : ಗೋಕಳ್ಳರಿಂದ ರಕ್ಷಿಸಲ್ಪಟ್ಟ ಗೋವುಗಳು ಗೋಶಾಲೆಗೆ

ಆದಿ ಉಡುಪಿ ಸಂತೆ ಮಾರ್ಕೆಟಿನ ಬಳಿ ಗೋವುಗಳ್ಳರಿಂದ ರಕ್ಷಿಸಲ್ಪಟ್ಟ ಮೂರು ಕರುಗಳನ್ನು ಕೊಡವೂರಿನ ನಂದಗೋಕುಲ ಗೋಶಾಲೆಗೆ ಸೇರಿಸಿದ್ದಾರೆ.
ಗುರುರಾಜ್ ಅಮಿನ್ ಅವರು ಗೋವುಗಳ್ಳರಿಂದ ಮತ್ತು ಬೀದಿ ನಾಯಿಗಳಿಂದ ಕರುಗಳನ್ನು ರಕ್ಷಿಸಿ, ಮೇವು ನೀಡಿ ಸುರಕ್ಷಿತವಾಗಿಟ್ಟಿದ್ದರು. ಬಳಿಕ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಗಮನಕ್ಕೆ ತಂದರು. ತಕ್ಷಣ ಒಳಕಾಡು ಅವರು ಅಲ್ಲಿಯ ತಂಡದವರಿಂದ ಕರುಗಳನ್ನು ಗೋಶಾಲೆಗೆ ದಾಖಲುಪಡಿಸಿದರು. ಗೋಶಾಲೆಯ ಮೇಲ್ವಿಚಾರಕ ಇಂದು ಶೇಖರ್ ಗೋಕರುಗಳಿಗೆ ಆಶ್ರಯ ನೀಡಿ ಮಾನವೀಯತೆ ಮೆರೆದರು.