ಉಡುಪಿ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಭೀಷ್ಮ ಪಿತಾಮಹ ಉಡುಪಿ ಪುರಸಭೆ ಮಾಜಿ ಅಧ್ಯಕ್ಷ ಮಲ್ಪೆ ಎಂ.ಸೋಮಶೇಖರ ಭಟ್ ನಿಧನ

ಎಂ.ಸೋಮಶೇಖರ ಭಟ್ (89) ಇಂದು ಇಹ ಲೋಕ ತ್ಯಜಿಸಿದ್ದಾರೆ. ದಿವಂಗತ ಎಂ.ಸೋಮಶೇಖರ ಭಟ್ ಸಂಘ ಪರಿವಾರದ ಹಿರಿಯ ನಾಯಕರಾದ ಇವರು ಉಡುಪಿ ಜಿಲ್ಲೆಯಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಕಟ್ಟುವಲ್ಲಿ ಅವಿರತವಾಗಿ ಶ್ರಮವಹಿಸಿದವರು.

ಇವರು ವರುಣ್ ಪೈಪಿಂಗ್ ಸಿಸ್ಟಮ್ ನ ಸ್ಥಾಪಕರಾಗಿದ್ದು, ಇವರು ಜನಮಾನಸದಲ್ಲಿ ಸೋಮಣ್ಣ ಎಂದೇ ಪ್ರಖ್ಯಾತರಾದ ಇವರು ಮಾಜಿ ಸಚಿವ ದಿವಂಗತ ಡಾಕ್ಟರ್ ವಿ.ಎಸ್.ಆಚಾರ್ಯರ ರಾಜಕೀಯ ಗುರುಗಳಾಗಿದ್ದರು. ಇವರು ಪತ್ನಿ ಇಬ್ಬರು ಗಂಡು ಮಕ್ಕಳು ಹಾಗೂ ಮಗಳನ್ನು ಅಗಲಿರುತ್ತಾರೆ.ದಿವಂಗತರಾದ ಸೋಮಶೇಖರ ಭಟ್ ಇವರು 1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 18 ತಿಂಗಳು ಬೆಂಗಳೂರಿನಲ್ಲಿ ಲಾಲಕೃಷ್ಣ ಅಡ್ವಾಣಿಯವರೊಂದಿಗೆ ಸೆರೆವಾಸವನ್ನು ಅನುಭವಿಸಿದ್ದು,ರಾಮಮಂದಿರದ ಕರಸೇವೆಯಲ್ಲಿ ಭಾಗವಹಿಸುವಲ್ಲಿ ಮುಂಚೂಣಿಯಲ್ಲಿದ್ದರು.ಇವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದು,ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ) ಕಡಿಯಾಳಿ ಇದರ ಸ್ಥಾಪಕ ಸದಸ್ಯರಾಗಿ, ಕುಂಜಿಬೆಟ್ಟು ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘ(ರಿ)ದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಉಡುಪಿ ಜಿಲ್ಲೆಯ ಹಿರಿಯ ಕೈಗಾರಿಕೋದ್ಯಮಿಯಾಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದು,ಕೊಡುಗೈ ದಾನಿಯಾಗಿದ್ದರು. ಇವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಹಾಗೂ ಅಸಂಖ್ಯಾತ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ದಿವಂಗತ ಎಂ.ಸೋಮಶೇಖರ ಭಟ್ಟರ ಪಾರ್ಥಿವ ಶರೀರದ ದರ್ಶನಕ್ಕೆ ಸೋಮವಾರದಂದು ಕಾಡುಬೆಟ್ಟಿನ ನಳಂದ ಸ್ವಗ್ರಹದಲ್ಲಿ ವ್ಯವಸ್ಥೆ ಮಾಡಲಾಗಿದ್ದು,ತದನಂತರ ಬೀಡಿನ ಗುಡ್ಡೆಯಲ್ಲಿ ದಹನ ಕ್ರಿಯೆ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ.

Related Posts

Leave a Reply

Your email address will not be published.