“ಮೊಗಲ್ ದೊರೆ ದಂಡೆತ್ತಿ ಬಂದದ್ದು ಮುಖ್ಯವಲ್ಲ, ಶಿವಾಜಿ ದೇಶದ ಸಮಗ್ರತೆ ಕಾಪಾಡಿದ್ದು ಮುಖ್ಯ” : ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಜೂನ್ 22 ರಂದು ಉಡುಪಿಯ ಕಿದಿಯೂರು ಹೋಟೆಲ್ ನ ಶೇಷಶಯನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಿಮಗೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲು ಯಾರು ಕೇಳಿದ್ರು? ಶಿಕ್ಷಣ ಸಂಸ್ಥೆ, ಪಾಲಕರು, ವಿದ್ಯಾರ್ಥಿಗಳು ಯಾರು ಕೇಳಿದ್ರು? ಎನ್ ಸಿ ಆರ್ ಟಿ , ಯುಜಿಸಿ ಹೇಳಿತ್ತಾ? ನೀವೇ ಮುಂದಾಗಿ ಈ ಕೆಲಸ ಮಾಡಿದ್ದೀರಿ. ಸಚಿವರಿಗೆ ಶಿಕ್ಷಣ ಖಾತೆ ಏನು ಅಂತ ಗೊತ್ತಾಗುವ ಮೊದಲೇ ಗೊಂದಲಕ್ಕೆ ದೂಡಿದ್ಧೀರಿ. ಪರಿಷ್ಕರಣೆಗೆ ತಜ್ಞರ ಸಮಿತಿ ನಡೆಸದೇ ಅಧಿಕಾರಿಗಳ ಜೊತೆ ಚರ್ಚೆ ಮಾಡದೇ ಕೇವಲ ಎಡಪಂತೀಯರ ಸಲಹೆಯ ಮೇರೆಗೆ ಪರಿಷ್ಕರಣೆ ಮಾಡುತ್ತಿರುವುದು ಅಕ್ಷ್ಯಮ್ಯ ಅಪರಾಧ. 2005 ರಲ್ಲಿ ಕೇಂದ್ರ ಸರ್ಕಾರದಿಂದ ಪಠ್ಯಕ್ರಮ ಚೌಕಟ್ಟು ಬಂದಿತ್ತು. ಪಠ್ಯ 10-15 ವರ್ಷಕ್ಕೊಮ್ಮೆ ಬದಲು ಮಾಡಬೇಕು ಎಂದು ಸುತ್ತೋಲೆ ಕೊಟ್ಟಿದ್ದರು. ನಾನು ತಜ್ಞರ ಸಮಿತಿ ಮಾಡಿ, ಜನರಲ್ಲಿ ಚರ್ಚೆ ಮಾಡಿ 1 ರಿಂದ 12 ತರಗತಿಯ ಪಾಠ ಬದಲು ಮಾಡಿದೆ. ಆಗಲೂ ಕೇಸರಿಕರಣ ಮಾಡುತ್ತಾರೆ ಅಂದರೂ ತ್ಯಾಗ, ರಾಷ್ಟ್ರೀಯತೆಯ ವಿಷಯ ತಿಳಿಸುವುದು ನಮ್ಮ ಹೆಮ್ಮೆ ಎಂದು ಆವತ್ತೇ ಹೇಳಿದ್ದೆ. ಆದರೂ ಎನ್ ಸಿ ಆರ್ ಟಿ, ಯುಜಿಸಿಗೆ ಕಂಪ್ಲೇಂಟ್ ಮಾಡಿದ್ದರು. ವಿಚಾರಣೆಯ ಬಳಿಕ ದೇಶದಲ್ಲೇ ಅತ್ಯುತ್ತಮ ಪಠ್ಯ ಎಂದು ಹೊಗಳಿದ್ದರು. ಎಡಪಂತೀಯ ವಿಚಾರಕ್ಕೆ ಹೋಲುವಂತೆ ಬರಗೂರು ಸಮಿತಿ ಪಠ್ಯ ರಚಿಸಿತು.

ನಾವು ಭಾರತೀಯ ದೃಷ್ಟಿಕೋನದ ವಿಚಾರ ಕಲಿಸಬೇಕು ಎಂಬ ಕಲ್ಪನೆ ಹೊಂದಿದ್ದೆವು. ದಾಸ್ಯ ಮನೋಭಾವದ ಶಿಕ್ಷಣ ಕಲಿಯೋದರಲ್ಲಿ ಏನಿದೆ? ಮೊಗಲ್ ದೊರೆ ದಂಡೆತ್ತಿ ಬಂದದ್ದು ಮುಖ್ಯ ಅಲ್ಲ, ಶಿವಾಜಿ ದೇಶದ ಸಮಗ್ರತೆ ಕಾಪಾಡಿದ್ದು ಮುಖ್ಯ. ಅಲರಕ್ಸಾಂಡರ್ ಪಾಠಕ್ಕಿಂತ ಶಿವಾಜಿಯ ಪಾಠ ಮುಖ್ಯ ಅಂದಿದ್ದೆವು. ಆದರೆ ಬರಗೂರು ಎಡಪಂತೀಯ ಚಿಂತನೆಯ ಪಠ್ಯ ಸಿದ್ದಪಡಿಸಿದರು. ಈಗ ಮತ್ತೆ ಮಕ್ಕಳನ್ನು, ಪೋಷಕರನ್ನು ಗೊಂದಲದಲ್ಲಿ ಇರಿಸುವ ಪಠ್ಯ ಸಿದ್ದಪಡಿಸಿದ್ದಾರೆ. ತಾಯಿ ಭಾರತಿಯ ಅಮರ ಪುತ್ರರು ರಾಜಗುರು, ಸುಖದೇವ್, ಭಗತ್ ಸಿಂಗ್ ಬಗೆಗಿನ ಪಾಠದಲ್ಲಿ ಯಾವ ಶಬ್ದ ಕಲಿಯುವುದರಿಂದ ತೊಂದರೆ ಹೇಳಿ? ಹೆಡಗೇವಾರ್ ಪಾಠದಲ್ಲಿ ಯಾವ ಶಬ್ದ ನಿಮಗೆ ಅಪಥ್ಯವಾಯ್ತು ಹೇಳಿ?ಪಾಠದಲ್ಲಿ ತಪ್ಪಿಲ್ಲ, ಬರೆದವರು ಯಾರು ನೋಡಿ ತೆಗೆದಿದ್ದಾರೆ. ನಾವು ಜನತೆಯ ಜೊತೆ ಸಂವಾದ ಮಾಡಿ ಪಠ್ಯ ಮಾಡಿದ್ದೇವೆ. ಶಿಕ್ಷಕರು, ಮಕ್ಕಳು, ಪಾಲಕರೇ ಪುಸ್ತಕ ಮುದ್ರಣ ಆಗಿದೆ. ಕಾಂಗ್ರೆಸ್ ಸರ್ಕಾರ ಕಲಿಸದಿದ್ದರೆ ಬೇಡ, ನೀವೇ ಮಕ್ಕಳಿಗೆ ಆ ಪಾಠ ಕಲಿಸಿ ಎಂದು ಪಠ್ಯ ಪರಿಷ್ಕರಣೆಯ ವಿರುದ್ಧ ಕಿಡಿಕಾರಿದರು.

Related Posts

Leave a Reply

Your email address will not be published.