ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ವಿಕೇಶ್ ಶೆಟ್ಟಿ

ಬಂಟ್ವಾಳ: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿಯೊಬ್ಬರನ್ನು ಯಾವುದೇ ಝೀರೋ ಟ್ರಾಫಿಕ್ ಇಲ್ಲದೆ ಕೇವಲ ಇಂಡಿಕೇಟರ್ ಹಾಕುವ ಮೂಲಕ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಸುಮಾರು 19 ಕಿ.ಮೀ. ದೂರವನ್ನು ಕೇವಲ 8.5 ನಿಮಿಷದಲ್ಲಿ ತಲುಪಿಸಿದ ಮಾಣಿಯ ಯುವಕ ಮಂಡಲ ಸದಸ್ಯರೂ ಆಗಿರುವ ಯುವ ಕಾಂಗ್ರೆಸ್ ವಲಯಾಧ್ಯಕ್ಷ ವಿಕೇಶ್ ಶೆಟ್ಟಿ ಅವರ ಕಾರ್ಯ ಈಗ ಪ್ರಶಂಸೆಗೆ ಪಾತ್ರವಾಗಿದೆ. ಗುರುವಾರ ರಾತ್ರಿ ಮಾಣಿ ಸಮೀಪ ಬುಡೋಳಿಯ ಯುವತಿಯೊಬ್ಬರು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದು, ಆಂಬುಲೆನ್ಸ್ ಗಾಗಿ ಸಂಬಂಧಪಟ್ಟವರು ಕರೆ ಮಾಡುತ್ತಿದ್ದಾಗ, ಯುವ ಕಾಂಗ್ರೆಸ್ ಮಾಣಿ ವಲಯಾಧ್ಯಕ್ಷರೂ ಆಗಿರುವ ವಿಕೇಶ್ ಶೆಟ್ಟಿ ಅವರ ಗಮನಕ್ಕೆ ವಿಷಯ ಬಂದಿದೆ. ಈ ಸಂದರ್ಭ ತನ್ನ ಸ್ವಿಫ್ಟ್ ಕಾರನ್ನು ತೆಗೆದುಕೊಂಡು ಯುವತಿ ಹಾಗೂ ಅವರ ಸಂಬಂಧಿಕರನ್ನು ಕರೆದುಕೊಂಡು ರಾತ್ರಿ ಸುಮಾರು 8.30ರ ವೇಳೆಗೆ ಬುಡೋಳಿಯಿಂದ ಮಾಣಿಗೆ ಬಂದು ಅಲ್ಲಿಂದ ಪುತ್ತೂರು ಆಸ್ಪತ್ರೆಗೆ ತಲುಪಿದ್ಧಾಗಿ ವಿಕೇಶ್ ಶೆಟ್ಟಿ ತಿಳಿಸಿದ್ದಾರೆ.

Related Posts

Leave a Reply

Your email address will not be published.