ಕಾರ್ಕಳ ಆನೆಕೆರೆ ಮುಖ್ಯ ರಸ್ತೆಯ ಸಮಸ್ಯೆ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ವಿನೂತನ ಪ್ರತಿಭಟನೆ

ಕಾರ್ಕಳ ಮೂರು ಮಾರ್ಗದಿಂದ ಆನೆಕೆರೆ ಮುಖ್ಯ ಮಾರ್ಗದಲ್ಲಿ ದಿನಕ್ಕೆ ಸಾವಿರಾರು ವಾಹನಗಳು ಓಡಾಡುತ್ತಿರುವ ರಸ್ತೆಯಾಗಿದೆ. ತಿಂಗಳುಗಳ ಹಿಂದೆ ಈ ರಸ್ತೆಯನ್ನು ಅಗೆದು ಒಳಚರಂಡಿಯ ಪೈಪ್ ಹಾಕಲಾಗಿತ್ತು. ಈ ಕಾಮಗಾರಿ ನಡೆದ ನಂತರ ಈ ರಸ್ತೆಯನ್ನು ಸರಿಯಾಗಿ ದುರಸ್ತಿ ಮಾಡದೆ ಹಾಗೆಯೇ ಬಿಡಲಾಯಿತು. ಒಂದೆರಡು ಬಾರಿ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಹಿನ್ನೆಲೆಯಲ್ಲಿ ಪುರಸಭೆಯವರು ಈ ರಸ್ತೆಯಲ್ಲಿ ಒಂದೆರಡು ಗಂಟೆಗಳ ಕಾಲ ರಿಪೇರಿ ಮಾಡುವ ನಾಟಕವನ್ನು ಮಾಡಿ ಹೋದರು.

ಆದರೆ ಒಂದೆರಡು ಮಳೆಬರುವ ಹೊತ್ತಿಗೆ ಪುರಸಭೆಯವರ ಕಳಪೆ ಕಾಮಗಾರಿ ಕೆಯ ಬಣ್ಣ ಬಯಲಾಯಿತು. ಆದರೆ ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಯಾವ ಇಲಾಖೆಯವರು ಮನಸ್ಸು ಮಾಡುತ್ತಿಲ್ಲ. ಈ ರಸ್ತೆಯಲ್ಲಿ ದಿನಕ್ಕೆ ಒಂದೆರಡು ಅಪಘಾತಗಳು ನಡೆಯುವುದು ಮಾಮೂಲಾಗಿದೆ. ಇದನ್ನು ಕಂಡ ರಿಕ್ಷಾ ಚಾಲಕರೊಬ್ಬರು ಈ ಹೊಂಡದಲ್ಲಿ ಬಾಳೆ ಗಿಡಗಳನ್ನು ನೆಟ್ಟು ಸಂಬಂಧಪಟ್ಟ ಇಲಾಖೆಗಳಿಗೆ ಎಚ್ಚರಿಕೆ ನೀಡುವ ವಿಶಿಷ್ಟ ಪ್ರತಿಭಟನೆಯನ್ನು ನಡೆಸಿದರು.

 

 

Related Posts

Leave a Reply

Your email address will not be published.