ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಕರ್ಪ್ಯೂ : ಮಂಗಳೂರಲ್ಲಿ ಅನಗತ್ಯ ಓಡಾಡುತ್ತಿದ್ದ ವಾಹನಗಳು ಸೀಝ್
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ವೀಕೆಂಡ್ ಕರ್ಪ್ಯೂ ಹಿನ್ನೆಲೆನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿಗಿ ಬಂದೋ ಬಸ್ ಮಾಡಲಾಗಿದೆ. ನಗರದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರ ವಾಹನಗಳಿಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ.40ಕ್ಕೂ ಅಧಿಕ ಕಡೆ ಚೆಕ್ ಪೋಸ್ಟ್‍ಗಳನ್ನು ಮಾಡಿದ್ದು ಪ್ರತೀ ಚೆಕ್‍ಪೋಸ್ಟ್‍ನಲ್ಲೂ 10ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.. ಮೆಡಿಕಲ್ ಮತ್ತು ತುರ್ತು ಸೇವೆ ಹೊರತುಪಡಿಸಿ ಸಂಚರಿಸೋ ವಾಹನಗಳನ್ನು ಪೊಲೀಸರು ಸೀಝ್ ಮಾಡಿದ್ದಾರೆ.
ಮಂಗಳೂರಿನ ಕದ್ರಿ, ನಂತೂರು, ಕೂಳೂರು ಸೇರಿ ವಿವಿಧ ಕಡೆಗಳಲ್ಲಿ ಅನಗತ್ಯವಾಗಿ ಸಂಚಾರ ಮಾಡುತ್ತಿರುವ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಹಾಲು, ಪೇಪರ್, ಮೆಡಿಕಲ್ ಹೊರತು ಪಡಿಸಿ , ಯಾವುದೇ ಅಂಗಡಿ ಮುಗ್ಗಟ್ಟು ತೆರೆದಿಲ್ಲ. ಇನ್ನು ಸಂಪೂರ್ಣ ಬಂದ್ ವೀಕೆಂಡ್ ಕರ್ಪ್ಯೂ ಹಿನ್ನೆಲೆ ಮಂಗಳೂರು ಸಂಪೂರ್ಣ ಸ್ತಬ್ಧವಾಗಿದ್ದು. ಮೆಡಿಕಲ್ ಮತ್ತು ತುರ್ತು ಸೇವೆ ಹೊರತುಪಡಿಸಿ ಸಂಚರಿಸೋ ವಾಹನಗಳನ್ನು ಪೊಲೀಸರು ವಿಚಾರಣೆಯನ್ನು ಮಾಡುತ್ತಿರುವ ದೃಶ್ಯ ಕಂಡು ಬಂತು.ಹಣ್ಣು, ತರಕಾರಿ ಮಾರ್ಕೆಟ್ ಬಂದ್, ಮಾಂಸ-ದಿನಸಿ ಖರಿದಿಗೆ ಬ್ರೇಕ್ ಹಾಕಿ ಕಟ್ಟುನಿಟ್ಟಿನ ಲಾಕ್ ಡೌನ್ ಮಾಡಲಾಗಿದೆ. ಹೊಟೇಲ್‍ಗಳಲ್ಲಿ ಆನ್ ಲೈನ್ ಫುಡ್ ಡೆಲಿವರಿಗಷ್ಟೇ ಅವಕಾಶ ಇದ್ದು. ಅನಗತ್ಯ ಸಂಚಾರಕ್ಕೆ ರಸ್ತೆಗಿಳಿದ್ರೆ ವಾಹಮ ಸೀಝ್ ಮಾಡಲು ಪೊಲೀಸ್ ಇಲಾಖೆ ಸರ್ವಸನ್ನದ್ಧವಾಗಿದೆ. ಒಟಿನಲ್ಲಿ ದ.ಕ ಜಿಲ್ಲೆಯಾದ್ಯಂತ ಸೋಮವಾರ ಬೆಳಿಗ್ಗೆ .7ಗಂಟೆಯವರೆಗೆ ಸಂಪೂರ್ಣ ಬಂದ್. ಜಾರಿಯಲ್ಲಿದ್ದು. ಸದ್ಯ ವೀಕೆಂಡ್ ಕರ್ಪ್ಯೂ ಹಿನ್ನೆಲೆ ರಸ್ತೆ ಮಾರುಕಟ್ಟೆ ಬಿಕೋ ಎನ್ನುತ್ತಿದೆ.