ಬಳ್ಳಾಲ್‍ಬಾಗ್ ಫ್ರೆಂಡ್ಸ್ ವತಿಯಿಂದ ನಡೆದ ಊದು ಕಾರ್ಯಕ್ರಮ
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಮಂಗಳೂರು ದಸರಾ ಶೋಭಾಯಾತ್ರಗೆ ಬಳ್ಳಾಲ್‍ಭಾಗ್ ಫ್ರೆಂಡ್ಸ್ ವತಿಯಿಂದ 14ನೇ ವರ್ಷದ ಊದು ಇಡುವ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.
ಬಳ್ಳಾಲ್‍ಭಾಗ್ ಫ್ರೆಂಡ್ಸ್‍ನ ಉಪಾಧ್ಯಕ್ಷರಾದ ರಕ್ಷಿತ್ ಕೊಟ್ಟಾರಿ ನೇತೃತದಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಬಾರಿ ದಸರಾ ಕಾರ್ಯಕ್ರಮದಲ್ಲಿ 14ನೇ ವರ್ಷದ ಹುಲಿಕುಣಿತಕ್ಕೆ ಚಾಲನೆ ನೀಡಿದ್ದೇವೆ. ಹುಲಿ ಕೋವಿಡ್ ನಿಯಮಾನುಸಾರ ನಡೆಯಲಿದೆ ಎಂದು ಹೇಳಿದರು.
ವಕೀಲರಾದ ರಾಘವೇಂದ್ರ ಮತ್ತು ಶರಣ್ ಪಂಪ್‍ವೆಲ್ ಅವರು ಮಾತನಾಡಿ ಬಳ್ಳಾಲ್‍ಭಾಗ್ ಫ್ರೆಂಡ್ಸ್ ಹುಲಿವೇಷ ಕುಣಿತ ಯಶಸ್ವಿಯಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಹುಲಿವೇಷದ ಸಾಮಾಗ್ರಿಗಳಿಗೆ ಪೂಜೆ-ಪುನಸ್ಕಾರಗಳು ನೆರವೇರಿದವು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದರೆ, ಜಿತೇಂದ್ರ ಕೋಟ್ಟಾರಿ, ಸತ್ಯಜಿತ್ ಸುರತ್ಕಲ್, ಬಳ್ಳಾಲ್‍ಭಾಗ್ ಫ್ರೆಂಡ್ಸ್‍ನ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.