ಬಾಣಾವರದಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿ ಆತ್ಮಹತ್ಯೆ: ಸಾರ್ವಜನಿಕರ ಆಕ್ರೋಶ

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಬಾಣಾವರದಲ್ಲಿ ವಾಹನ ತಪಾಸಣೆ ವೇಳೆ ಹೆಚ್ಚು ಶುಲ್ಕ ವಿಧಿಸಿದ ಹಿನ್ನೆಲೆಯಲ್ಲಿ ಮನನೊಂದು ವಾಹನ ಚಾಲಕ ಮಂಜುನಾಥ್ (೫೦) ತನ್ನ ವಾಹನದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತ ವ್ಯಕ್ತಿ ಬಾಣಾವರ ಸಮೀಪದ ಸರ್ವೆ ಕೊಪ್ಪಲು ಮೂಲದವರಾಗಿದ್ದು ಆರ್.ಟಿ.ಓ ಅಧಿಕಾರಿಗಳ ತಪಾಸಣೆಯ ವೇಳೆ ಹದಿನೇಳು ಸಾವಿರ ದಂಡವಿಧಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಕೊರೋನಾ ಹಿನ್ನೆಲೆಯಲ್ಲಿ ವಾಹನ ಸಾಲ ತೀರಿಸಲಾಗದೆ ಮೊದಲೇ ಮನನೊಂದಿದ್ದರು ಎಂದು ಸಾರ್ವಜನಿಕರು ದೂರಿದ್ದಾರೆ. ಆರ್.ಟಿ.ಓ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಮತ್ತು ವಾಹನ ಮಾಲೀಕರು ರಸ್ತೆಯಲ್ಲಿ ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿ.ಸಿ. ಆಗಮಿಸಬೇಕೆಂದು ಒತ್ತಾಯ ಮಾಡಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತು. ಸಾರ್ವಜನಿಕರ ನಿಯಂತ್ರಣ ಮಾಡುವಲ್ಲಿ ಅರಸೀಕೆರೆ ಹಾಗೂ ಬಾಣಾವರ ಪೊಲೀಸರು ಹರಸಾಹಸಪಟ್ಟರು

 

Related Posts

Leave a Reply

Your email address will not be published.