“ಭಕ್ತಿಕಾವ್ಯವು ಸಾಮಾಜಿಕ ಚೇತನದ ಸ್ಪೂರ್ತಿ” ಡಾ.ಮಂಜುನಾಥ ಅಂಬಿಗ
ಶ್ರೀ ಧರ್ಮಸ್ಥಳ ಮಂಜುನಾಥೇಶ್ಡರ ಮಹಾವಿದ್ಯಾಲಯದ ಹಿಂದಿ ವಿಭಾಗ ಆಯೋಜಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಮಂಜುನಾಥ ಅಂಬಿಗ [ಪ್ರೋ. ಮತ್ತು ಉಪನ್ಯಾಸಕರು ದಕ್ಷಣಬಾರತ ಸ್ನಾತಕೋತ್ತರ ಕೇಂದ್ರ ಹಿಂದಿ ಪ್ರಚಾರಸಭಾ ಮದ್ರಾಸ ಅವರು ಮದ್ಯಯುಗದ ಕಾವ್ಯಪರಂಪರೆ ಬಾರತೀಯ ಸಮಾಜಿಕ ಜೀವನಕ್ಕೆ ಚೇತನ ತುಂಬಿದ್ದಲ್ಲದೆ ಕಬೀರದಾಸರು, ಸೂರದಾಸರು ತುಲಸಿದಾಸರು ಬಿಹಾರಿಲಾಲರು ರಹೀಮರಾದಿಯಾಗಿ ತಮ್ಮ ತತ್ವಪದಗಳೊಂದಿಗೆ ಅಸಂಘಟಿತ ಗೊಂದಲ ಹಾಗು ಆಸುರಕ್ಷಿತ ಸಮಾಜವನ್ನ ಬೆಸೆಯುವ ಕಾರ್ಯವನ್ನ ಮಾಡಿದ್ದರೆ. ಭಕ್ತಿಪಂಥದ ಪದಗಳು ಸದಾಕಾಲಕ್ಕು ಸಮಾಜಕ್ಕೆ ದಿಗ್ದರ್ಶನ ನೀಡುತ್ತವೆ ಎಂದು ನುಡಿದರು.
ಆನ್ಲೈನ ಮೂಲಕ ನಡೆದ ಕಾರ್ಯಕ್ರಮದಲ್ಲಿ ಡಾ. ವಿಜಯಕುಮಾರ ಶೆಟ್ಟಿ ಡೀನ ಮಾರ್ಗದರ್ಶನ ನೀಡಿದರು. ಡಾ.ಮಲ್ಲಿಕಾರ್ಜುನ ನಿರೂಪಿಸಿದರು. ಶ್ರೀಮತಿ ಶೃತಿ ಮಂಕೀಕರ ವಂದಿಸಿದರು. ಡಾ.ಗಣರಾಜ ಭಟ್ ಪ್ರೋ.ಅಭಿನಂದನ್ ಜೈನ್, ಡಾ.ಮಹೇಶ್ ಶೆಟ್ಟಿ ಉಪಸ್ಥಿತರಿದ್ದರು.