ಮಂಜೇಶ್ವರದಲ್ಲಿ ಮದ್ಯಸಾಗಟದ ಆಟೋ ರಿಕ್ಷಾ ಪಲ್ಟಿ ರಿಕ್ಷಾ ಚಾಲಕ ಪರಾರಿ
ಮಂಜೇಶ್ವರ: ಪೊಲೀಸರ ಕಣ್ತಪ್ಪಿಸಿ ಕರ್ನಾಟಕದ ಒಳ ರಸ್ತೆಯಿಂದ ಅಮಿತ ವೇಗದಲ್ಲಿ ಆಗಮಿಸಿದ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿಗೆ ಅಲ್ಪ ಮುಂದೆ ಪಲ್ಟಿಯಾಗಿದೆ. ಚಾಲಕನಿಗೆ ಅಲ್ಪ ಗಾಯವಾಗಿದ್ದರೂ ಇದ್ದಲ್ಲಿಂದ ಎದ್ದು ಪರಾರಿಯಾಗಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇಂದು ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ಕುಂಜತ್ತೂರು ಪದವು ರಸ್ತೆಯಂದ ಮದ್ಯವನ್ನು ಹೇರಿಕೊಂಡು ಆಗಮಿಸಿದ ರಿಕ್ಷಾ ಪಲ್ಟಿಯಾಗಿದೆ. ಬಳಿಕ ಊರವರು ಸಮೀಪ ಆಗಮಿಸುವಷ್ಟರಲ್ಲ ಚಾಲಕ ಪರಾರಿಯಾಗಿದ್ದಾನೆ. ಬಳಿಕ ಆಗಮಿಸಿದ ಮಂಜೇಶ್ವರ ಪೊಲೀಸರು ರಕ್ಷಾವನ್ನು ತಪಾಸಣೆಗೈದಾಗ ಭಾರೀ ಪ್ರಮಾಣದ ಮದ್ಯದ ಹದಿನೈದು ಬಾಕ್ಸ್ ಗಳು ಪತ್ತೆಯಾಗಿವೆ. ರಿಕ್ಷಾ ಹಾಗೂ ಮದ್ಯವನ್ನು ಪೊಲೀಸರು ವಶಕ್ಕೆ ತೆಗೆದು ಚಾಲಕನಿಗಾಗಿ ಶೋಧ ಆರಂಭಿಸಿದ್ದಾರೆ.