ಮೂಡುಬಿದಿರೆ: ಹಳೆ ಕಾರಿನೊಳಗಡೆ ಶವ ಪತ್ತೆ
ಮೂಡುಬಿದಿರೆ: 2೦ ದಿನಗಳ ಹಿಂದೆ ನಾಪತ್ತೆಯಾಗಿದ್ದ ವೃದ್ಧರೊಬ್ಬರ ಶವವು ಜ್ಯೋತಿನಗರ ಗಾಂಧಿಪಾರ್ಕ್ ಬಳಿ ನಿಲ್ಲಿಸಲಾಗಿದ್ದ ಹಳೆ ಕಾರಿನೊಳಗಡೆ ಬುಧವಾರ ಮಧ್ಯಾಹ್ನ ಪತ್ತೆಯಾಗಿದೆ.
ಪುರಸಭೆ ವ್ಯಾಪ್ತಿಯ ಕರಿಂಜೆ ಗ್ರಾಮ ನಿವಾಸಿ ಶ್ರೀಧರ ಶೆಟ್ಟಿ(73) ಸೆಪ್ಟೆಂಬರ್ 29ರಂದು ನಾಪತ್ತೆಯಾಗಿದ್ದರು. ಈ ಬಗ್ಗೆ ಶ್ರೀಧರ ಶೆಟ್ಟಿ ಅವರ ಮಗ ರೋಹಿತ್ ಶೆಟ್ಟಿ ಅವರು ಅಕ್ಟೋಬರ್ 6ರಂದು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬುಧವಾರ ಜ್ಯೋತಿನಗರ ಮೆಸ್ಕಾಂ ಪರಿಸರದಲ್ಲಿ ದುರ್ವಾಸನೆಯಿಂದ ಕೂಡಿದ್ದು, ಸ್ಥಳೀಯರು ಕಾರಿನೊಳಗಡೆ ಶವ ಇರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.