ವಾಮಂಜೂರು ಟೈಗರ್ಸ್ ವತಿಯಿಂದ ರಕ್ತದಾನ ಶಿಬಿರ, ವೃಕ್ಷಾರೋಹಣ

ಮಂಗಳೂರು: ವಾಮಾಂಜೂರು ಟೈಗರ್ಸ್ ಇದರ ವತಿಯಿಂದ ಕೆ.ಎಂ‌.ಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ದಿ.ನವೀನ್ ಮಿಜಾರ್ ಇವರ ಎರಡನೇ ವರ್ಷದ ಪುಣ್ಯಸ್ಮರಣೆಯ ಸಲುವಾಗಿ ವಾಮಂಜೂರಿನ ಶ್ರೀ ರಾಮ ಭಜನಾ ಮಂದಿರದಲ್ಲಿ ಆದಿತ್ಯವಾರ ನಡೆದ ರಕ್ತದಾನ ಶಿಬಿರವನ್ನು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ವಾಮಂಜೂರು ಟೈಗರ್ಸ್ ಸಂಘಟನೆಯ ಪ್ರಮುಖರು ಶಾಸಕರ ಉಪಸ್ಥಿತಿಯಲ್ಲಿ ಸಸಿ ನೆಡುವ ಮೂಲಕ ವೃಕ್ಷಾರೋಹಣ ಮಾಡಿದರು. ಕಾರ್ಯಕ್ರಮದಲ್ಲಿ ಭಾಜಪಾ ಉತ್ತರ ಮಂಡಲ ಅಧ್ಯಕ್ಷರಾದ ತಿಲಕರಾಜ್ ಕೃಷ್ಣಾಪುರ, ಬಿಜೆಪಿ ವಕ್ತಾರ ಜಗದೀಶ್ ಶೇಣವ, ಸ್ಥಳೀಯ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್, ಸಂಘಟನೆಯ ಸದಸ್ಯರು, ಪಕ್ಷದ ಪ್ರಮುಖರು,ಗಣ್ಯರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.