ಸಹಕಾರಿ ಕ್ಷೇತ್ರದಲ್ಲಿ ರಂಗನಾಥ ಶೆಟ್ಟಿ ಸಾಧನೆ ಅನುಕರಣೀಯ: ಶ್ರೀ ಚಂದ್ರಶೇಖರ ಸ್ವಾಮೀಜಿ

ಮುಲ್ಕಿ:ಗ್ರಾಮೀಣ ಪ್ರದೇಶದ ಸಹಕಾರಿ ಕ್ಷೇತ್ರದಲ್ಲಿ ಜನಸೇವೆ ಮೂಲಕ ರಂಗನಾಥ ಶೆಟ್ಟಿಯವರ ಸಾಧನೆ ಅನುಕರಣೀಯ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಅವರು ಮುಲ್ಕಿಯ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಪ್ರಕೋಷ್ಠದ ಸಂಚಾಲಕರಾಗಿ ಆಯ್ಕೆಯಾದ ಮುಲ್ಕಿ ವಿಜಯ ಸೊಸೈಟಿಯ ಅಧ್ಯಕ್ಷ ರಂಗನಾಥ ಶೆಟ್ಟಿಯವರನ್ನು ಗೌರವಿಸಿ ಮಾತನಾಡಿದರು.ಕಳೆದ ಹಲವಾರು ವರ್ಷಗಳಿಂದ ವಿವಿಧ ಸಂಘಟನೆಗಳ ಮೂಲಕ ಮುಲ್ಕಿ ಪರಿಸರದಲ್ಲಿ ಬಡವರ ಹಿಂದುಳಿದ ವರ್ಗದವರ ಶಕ್ತಿಯಾಗಿ ಜನಮನ್ನಣೆ ಗಳಿಸಿರುವ ರಂಗನಾಥ ಶೆಟ್ಟಿ ಯವರ ಸೇವೆ ನಿರಂತರವಾಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭ ಆಶ್ರಮದ ನಿರ್ದೇಶಕರಾದ ರಜನಿ ಚಂದ್ರಶೇಖರ್ ಭಟ್, ರೋಶನಿ ಭಟ್, ರಾಹುಲ್ ಸಿ ಭಟ್, ಸಂಚಾಲಕರಾದ ಪುನೀತ್ ಕೃಷ್ಣ, ವಿಜಯ ರೈತ ಸೊಸೈಟಿ ನಿರ್ದೇಶಕ ದೇವಿಪ್ರಸಾದ್ ಕೆಂಪುಗುಡ್ಡೆ, ಭದ್ರತಾ ಸಿಬ್ಬಂದಿ ಮಂಜುನಾಥ ಗೌಡ್ರು ಮತ್ತಿತರರು ಉಪಸ್ಥಿತರಿದ್ದರು. ರಾಹುಲ್ ಸಿ ಭಟ್ ಸ್ವಾಗತಿಸಿದರು. ಪುನೀತ್ ಕೃಷ್ಣ ನಿರೂಪಿಸಿದರು.

Related Posts

Leave a Reply

Your email address will not be published.