ಹಿದಾಯ ಫೌಂಡೇಶನ್ ಗೆ ರಾಜೀನಾಮೆ ನೀಡಿದ ಟೀಂ ಬಿ-ಹ್ಯೂಮನ್ ಸಂಸ್ಥಾಪಕ

ಮಂಗಳೂರಿನ ಖ್ಯಾತ ಸಮಾಜ ಸೇವಾ ಸಂಸ್ಥೆಯಾದ ಟೀಂ ಬಿ-ಹ್ಯೂಮನ್ ಇದರ ಸಂಸ್ಥಾಪಕರಾದ ಆಸಿಫ್ ಡೀಲ್ಸ್ ರವರು ಹಿದಾಯ ಫೌಂಡೇಶನ್ ನ ಎಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಕಳೆದ 13 ವರ್ಷಗಳಿಂದ ಸಕ್ರಿಯವಾಗಿ ಹಿದಾಯ ಫೌಂಡೇಶನ್ ಸದಸ್ಯರಾಗಿದ್ದು ಪ್ರಸ್ತುತ ವೈಸ್ ಚೇರ್ಮನ್ ಹಾಗೂ ಟ್ರಸ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಇಷ್ಟು ವರ್ಷಗಳಿಂದ ಯಾವುದೇ ಪೂರ್ವಾಗ್ರಹವಿಲ್ಲದೆ ಎರಡೂ ಸಂಸ್ಥೆಗಳಲ್ಲಿ ಸಮಾನವಾಗಿ ತನ್ನನ್ನು ತಾನು ತೊಡಗಿಸಿಕೊಂಡು ಸೇವೆಗೈಯುತ್ತಿದ್ದುದು ಯಾರೂ ನಿರಾಕರಿಸಲಾಗದಂತಹ ಸತ್ಯ. ಕೆಲವು ಅನಿವಾರ್ಯ ಕಾರಣಗಳಿಂದಾಗಿ ಹಿದಾಯ ಫೌಂಡೇಶನ್ ನ ಸದಸ್ಯತ್ವ ಸೇರಿ ಎಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದು ಭವಿಷ್ಯದ ಯಾವುದೇ ಯೋಜನೆಗಳಲ್ಲಿ ಅವರು ಯಾವುದೇ ಸಂಭಂದ ಹೊಂದಿರುವುದಿಲ್ಲ.ಕೆಲವರು ಹರಡುತ್ತಿರುವ ವದಂತಿಗಳನ್ನು ಹಾಗೂ ಸದಸ್ಯರ ನಡುವಿನ ಗೊಂದಲವನ್ನು ತೆರವುಗೊಳಿಸುವುದೇ ಈ ಸಂದೇಶದ ಪ್ರಮುಖ ಉದ್ದೇಶ. ಆದಷ್ಟು ಬೇಗ ರಾಜೀನಾಮೆಗೆ ಮುಖ್ಯ ಕಾರಣವನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗುವುದು.

ತನ್ನೊಟ್ಟಿಗೆ ಹಿದಾಯ ಫೌಂಡೇಶನ್ ನ್ನು ಈ ಮಟ್ಟಕ್ಕೇರಿಸಲು ಆರ್ಥಿಕವಾಗಿ ಮತ್ತು ದೈಹಿಕವಾಗಿ ಸಹಕರಿಸಿದ ಎಲ್ಲ ಯುನಿಟ್ ನ ಸದಸ್ಯರು, ಹಿತೈಷಿಗಳು ಹಾಗೂ ದಾನಿಗಳು ಅದನ್ನು ಮುಂದುವರಿಸಿ, ಮುಂದಿನ ದಿನಗಳಲ್ಲಿ ತಮ್ಮ ಸಂಪೂರ್ಣ ಸಹಕಾರವನ್ನು ಹಿದಾಯ ಫೌಂಡೇಶನ್ ಗೆ ನೀಡಬೇಕೆಂದು ಎಲ್ಲರಲ್ಲಿ ಆಸಿಫ್ ಡೀಲ್ಸ್ ರವರು ವಿನಮ್ರವಾಗಿ ವಿನಂತಿಸಿದ್ದಾರೆ. ಹಾಗೂ ಹಿದಾಯ ಫೌಂಡೇಶನ್ ನ ಭವಿಷ್ಯದ ಎಲ್ಲ ಕಾರ್ಯಕ್ರಮಗಳಿಗೆ ಯಾವುದೇ ಕುಂದುಂಟಾಗಬಾರದೆಂದು ತಾನು ರಾಜೀನಾಮೆಯ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

Related Posts

Leave a Reply

Your email address will not be published.