ಮೊದಲ ಬಾರಿಗೆ ಸೆಮಿಫೈನಲ್ಗೆ ಲಗ್ಗೆ ಇಟ್ಟ ಭಾರತದ ಮಹಿಳಾ ಹಾಕಿ ತಂಡ
ಒಲಿಂಪಿಕ್ಸ್ ನಲ್ಲಿ ಭಾರತದ ಮಹಿಳಾ ಮತ್ತು ಪುರುಷ ಹಾಕಿ ತಂಡ ಇತಿಹಾಸ ಬರೆದಿದೆ. ಪುರುಷರ ಹಾಕಿ ತಂಡ ಸೆಮಿ ಫೈನಲ್ ಪ್ರವೇಶಿಸಿದ ಮರುದಿನವೇ ಭಾರತದ ವನಿತೆಯರ ತಂಡ ಕೂಡಾ ಸೆಮಿ ಫೈನಲ್ ಗೆ ಎಂಟ್ರಿ ಕೊಟ್ಟಿದೆ.

ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತ ತಂಡ 1-0 ಗೋಲುಗಳ ಅಂತರದಿಂದ ಸೋಲಿಸಿತು. ಭಾರತದ ಗುರ್ಜೀತ್ ಕೌರ್ 22ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು. ನಂತರ ಸಮಬಲ ಸಾಧಿಸಲು ಆಸ್ಟ್ರೇಲಿಯಾ ವನಿತೆಯರು ಹರಸಾಹಸ ಪಟ್ಟರೂ ಭಾರತದ ಬಲಿಷ್ಠ ಡಿಫೆನ್ಸ್ ದಾಟಿ ಗೋಲು ಗಳಿಸಲು ಸಾಧ್ಯವಾಗಿಲ್ಲ.


















