ಹೆಜಮಾಡಿಯಲ್ಲಿ ಆಕ್ಸಿಜನ್ ಗಾಳಿಗೆ ಬಿಡಲಾಯಿತೇ..!: ವೀಡಿಯೋ ವೈರಲ್
ಆಂಧ್ರಪ್ರದೇಶ ನೋಂದಾಯಿತ ಸಂಖ್ಯೆಯ ಟ್ಯಾಂಕರೊಂದರಲ್ಲಿದ್ದ ಆಕ್ಸಿಜನನ್ನು ಹೆಜಮಾಡಿ ಬಳಿ ಗಾಳಿಗೆ ಬಿಡುತ್ತಿದ್ದ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೆಜಮಾಡಿಯ ಡಾಬದ ಬಳಿ ಲಾರಿಗಡ್ಡವಾಗಿ ನಿಂತು ಆಕ್ಸಿಜನ್ ತುಂಬಿತ್ತು ಎನ್ನಲಾದ ಟ್ಯಾಂಕರ್ನಿಂದ ಅದರ ನಿರ್ವಾಹಕ, ಚಾಲಕರೇ ಆಕ್ಸಿಜನ್ ಗಾಳಿಗೆ ಬಿಟ್ಟಿದ್ದು ಇದನ್ನು ಕಂಡ ಸ್ಥಳೀಯ ಬಾಲಕರು ಮೊಬೈಲ್ ಮೂಲಕ ಚಿತ್ರೀಕರಣ ಮಾಡಿದಾಗ ಅವರನ್ನು ಮಾಡದಂತೆ ಗದರಿಸಿದ್ದಾರೆ ಎನ್ನಲಾಗಿದೆ. ವಾಹನದ ಸಂಪೂರ್ಣ ಮಾಹಿತಿಯೂ ಸಾಮಾಜಿಕ ಜಾಲತಾಣದಲ್ಲಿ ಇದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸುವಂತೆ ಸಾರ್ವಜನಿಕರಿಂದ ಆಗ್ರಹ ಕೇಳಿ ಬರುತ್ತಿದೆ.

















