Home 2021 August (Page 5)

ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆದ ಯುವತಿ ಮೃತ್ಯು

ಕುಂದಾಪುರ ತಾಲೂಕು ಹರ್ಕೂರು ಗ್ರಾಮದ ಗುಡಿಮನೆ ನಿವಾಸಿ ಸುಮಾರು 21ಪ್ರಾಯದ ಅಶ್ವಿನಿ ಎಂಬುವರು ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಗಸ್ಟ್ ೨೩ರಂದು ಕೋವಿಡ್ ಲಸಿಕೆಯ ಪ್ರಥಮ ಡೋಸನ್ನು ಪಡೆದುಕೊಂಡಿದ್ದರು, ಲಸಿಕೆ ಪಡೆದ ಮರುದಿನ ರಾತ್ರಿ ಅತೀಯಾಗಿ ವಾಂತಿಯಾದುದರಿಂದ ಅಸ್ವಸ್ಥತೆಗೊಂಡ ಅಶ್ವಿನಿಯವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ವಿಟ್ಲ: ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

ವಿಟ್ಲ: ಎಸ್‍ಡಿಪಿಐ ಮಂಚಿ ಗ್ರಾಮ ಸಮಿತಿ ವತಿಯಿಂದ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ವಿರುದ್ಧ ಮಂಚಿ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಎಸ್‍ಡಿಪಿಐ ಮಂಚಿ ಗ್ರಾಮ ಸಮಿತಿ ಕಾರ್ಯದರ್ಶಿ ಕಬೀರ್ ಮಂಚಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಲಾಯಿತು. ಮಂಚಿ ಪಂಚಾಯತ್

ಕ್ರೀಡಾ ಭಾರತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆ : ಆ.31ರಂದು ಮಣ್ಣಗುಡ್ಡೆಯ ಸಂಘನಿಕೇತನದಲ್ಲಿ ಕಾರ್ಯಕ್ರಮ

ಮಂಗಳೂರಿನ ಸಂಘನಿಕೇತನದ ಕ್ರೀಡಾ ಭಾರತಿಯ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಮತ್ತು ಕ್ರೀಡಾ ಭಾರತಿ ಧ್ಯಾನ್‍ಚಂದ್ ಖೇಲ್ ರತ್ನ ಪ್ರಶಸ್ತಿ, ಜೀಜಾಬಾಯಿ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಅಗಸ್ಟ್ 31ರಂದು ಮಣ್ಣಗುಡ್ಡೆಯ ಸಂಘನಿಕೇತನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ರೀಡಾ ಭಾರತಿಯ ಗೌರವಾಧ್ಯಕ್ಷರಾದ ಬಿ. ನಾಗರಾಜ್ ಶೆಟ್ಟಿ ಹೇಳಿದರು. ಅವರು

ನವದೆಹಲಿ: ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡ ಖಾಸಗಿ ಶಾಲೆಗಳು ಮತ್ತು ಕ್ಷೇಮಾಭಿವೃದ್ಧಿ ಸಂಘಕ್ಕೆ ಗೌರವ

ಖಾಸಗಿ ಶಾಲೆಗಳು ಮತ್ತು ಕ್ಷೇಮಾಭಿವೃದ್ಧಿ ಸಂಘವು ಸಮಾಜ ಸೇವೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದು, ಅತ್ಯುತ್ತಮ ಸಂಘವೆಂದು ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನವದೆಹಲಿಯ ನ್ಯೂ ಫ್ರೈಡ್ ಪ್ಲಾಜಾ ಹೋಟೆಲ್‌ನಲ್ಲಿ ಸಂಘವನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು. ಖಾಸಗಿ ಶಾಲೆಗಳು ಮತ್ತು ಕ್ಷೇಮಾಭಿವೃದ್ಧಿ ಸಂಘವು ಹಣಕಾಸಿನ ನೆರವು, ವೈದ್ಯಕೀಯ ಸಹಾಯ, ಆಹಾರ

ಈ ಬಾರಿಯೂ ವಾರಾಂತ್ಯ ಕರ್ಫ್ಯೂ : ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

ದ.ಕ. ಜಿಲ್ಲೆಯಲ್ಲಿ ಕೊರೋನ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಈ ಬಾರಿಯೂ (ಆ. 28, 29) ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಆ. 27ರ ಶುಕ್ರವಾರ ರಾತ್ರಿ 9ರಿಂದ ಆರಂಭಗೊಳ್ಳುವ ವೀಕೆಂಡ್ ಕರ್ಫ್ಯೂ ಆ.30ರ ಸೋಮವಾರ ಬೆಳಗ್ಗೆ 5ರವರೆಗೆ ಜಾರಿಯಲ್ಲಿರುತ್ತದೆ.ಆ.28ರ ಶನಿವಾರ ಮತ್ತು ಆ.29ರ

ಹೊಸಬೆಟ್ಟುವಿನ ತಾವರೆಕೊಳದಲ್ಲಿ ಕಿರು ಸೇತುವೆ ನಿರ್ಮಾಣ : ವಿ4 ನ್ಯೂಸ್ ನ ವರದಿಗೆ ಎಚ್ಚೆತ್ತ ಅಧಿಕಾರಿಗಳು

ಹೊಸಬೆಟ್ಟುವಿನ ತಾವರೆಕೊಳದಲ್ಲಿದ್ದ ಕಿರು ಸೇತುವೆಯನ್ನು ದಿಢೀರ್ ಕೆಡವಿ ಹಾಕಿದ್ದು, ಇದರಿಂದ ಸ್ಥಳೀಯರಿಗೆ ತೊಂಬಾ ತೊಂದರೆಯಾಗಿತ್ತು. ಈ ಬಗ್ಗೆ ವಿ4 ನ್ಯೂಸ್ ಸಮಗ್ರ ವರದಿಯನ್ನು ಭಿತ್ತರಿಸಿತ್ತು. ಮಾತ್ರವಲ್ಲದೆ ಶಾಸಕ ಡಾ. ವೈ ಭರತ್ ಶೆಟ್ಟಿಯವರ ಗಮನಕ್ಕೆ ತರಲಾಗಿತ್ತು. ಇದೀಗ ಶಾಸಕರಾದ ಡಾ.ಭರತ್ ಶೆಟ್ಟಿಯವರ ಸಹಕಾರದೊಂದಿಗೆ ತಾವರೆಕೊಳದಲ್ಲಿ 74 ಲಕ್ಷ ರೂ.

ವಾರಾಂತ್ಯದ ಕರ್ಫ್ಯೂನಿಂದ ಆರ್ಥಿಕ ನಷ್ಟ ಅನುಭವಿಸಿದ್ದೇವೆ : ಬೆಳ್ತಂಗಡಿಯಲ್ಲಿ ವರ್ತಕರ ಸಂಘದ ಅರವಿಂದ ಕಾರಂತ್ ಹೇಳಿಕೆ

ಲಾಕ್ ಡೌನ್ ಸಂದರ್ಭದಲ್ಲಿ ಸುಮಾರು 64 ರಿಂದ65ದಿನಗಳ ಕಾಲ ಬೆಳ್ತಂಗಡಿ ತಾಲೂಕಿನ ಕೈಗಾರಿಕಾ ಸಂಘದ ಅಡಿಯಲ್ಲಿ ಬರುವ ವರ್ತಕರು ಸರಕಾರದ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಿದ್ದೇವೆ. ಆ ನಂತರ ಜಿಲ್ಲಾಧಿಕಾರಿಗಳು ಮಾಡಿರುವ ವಾರಾಂತ್ಯದ ಕರ್ಪ್ಯುನಿಂದಾಗಿ ಅಂಗಡಿ ಮಾಲಕರಾದ ನಾವು ಆರ್ಥಿಕ ನಷ್ಟವನ್ನು ಅನುಭವಿಸಿದ್ದೇವೆ. ಅಲ್ಲದೆ ನೂರಾರು ನೌ ಕರರು ಕೆಲಸವನ್ನು ಕಳೆದು

ಕಿಟ್ ವಿತರಣೆಯಾಗದೆ ಕೆಟ್ಟು ಹೋಗುತ್ತಿರುವ ಆಹಾರ : ಕಾರ್ಕಳದಲ್ಲಿ ಸುಭೋದ್ ರಾವ್ ಆರೋಪ

ಕರ್ನಾಟಕದ ಸರಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರ ಊರಿನಲ್ಲಿ ಅಹಾರ ಕಿಟ್ಟ್ ವಿತರಣೆಯಾಗದೆ ಆಹಾರ ಪದಾರ್ಥಗಳು ಕೆಟ್ಟುಹೋಗುತ್ತಿವೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಸಹಾಯವಾಗಲೆಂದು ಕಾರ್ಮಿಕ ಇಲಾಖೆಯಿಂದ ಆಹಾರ ಕಿಟ್ಟ್ ಬಿಡುಗಡೆಯಾಗಿದೆ. ಆದರೆ ಸಮರ್ಪಕವಾಗಿ ಕಿಟ್ಟ್ ವಿತರಣೆಯಾಗದೆ ಸಾವಿರಾರು ಕಿಟ್ಟ್ ಗಳ ಗೋಡಾನ್‍ನಲ್ಲಿ ರಾಶಿ

ದ.ಕ. ಜಿ.ಪಂ.ನಲ್ಲಿ ದ್ರವತ್ಯಾಜ್ಯ ನಿರ್ವಹಣೆ ಕುರಿತ ತರಬೇತಿ ಕಾರ್ಯಾಗಾರಕ್ಕೆ ಚಾಲನೆ

ಸ್ವಚ್ಛ ಭಾರತ್ ಮಿಷನ್ (ಗ್ರಾ) ಹಂತ-2ರ ಮಾರ್ಗಸೂಚಿಗಳನ್ವಯ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ದ್ರವತ್ಯಾಜ್ಯ ನಿರ್ವಹಣೆ ಕುರಿತ ತರಬೇತಿ ಕಾರ್ಯಾಗಾರಕ್ಕೆ ಜಿಪಂ ಸಿಇಒ ಡಾ.ಕುಮಾರ್ ಚಾಲನೆ ನೀಡಿದರು.ವೈಜ್ಞಾನಿಕ ದ್ರವತ್ಯಾಜ್ಯ ನಿರ್ವಹಣೆಗೆ ಸೂಕ್ತ ತಂತ್ರಜ್ಞಾನಗಳನ್ನು ಗುರುತಿಸಿ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲು ಮತ್ತು ಅನುಷ್ಠಾನಗೊಳಿಸಲು ಬೆಂಗಳೂರಿನ

ಕಾವೂರಿನಲ್ಲಿ ಬೀದಿ ಕಾಳಗಕ್ಕೆ ಮುಂದಾದ ಯುವಕರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು..!

ಮಂಗಳೂರು ನಗರದ ಕಾವೂರು ಜಂಕ್ಷನ್ ಬಳಿ ಸಂಜೆ ಏಳು ಗಂಟೆ ಸುಮಾರಿಗೆ ಬೀದಿ ಕಾಳಗ ನಡೆಯುವುದು ಪೊಲೀಸರ ಮುಂಜಾಗೃತ ಕ್ರಮದಿಂದ ತಪ್ಪಿದ್ದಂತಾಗಿದೆ. ಕಾವೂರು ಠಾಣೆಯ ಸ್ವಲ್ಪ ದೂರದಲಿಲ್ಪೀ ಘಟನೆ ನಡೆದಿದ್ದು ಎರಡು ಕೋಮುಗಳ ಯುವಕರು ಸೇರಿ ಬೀದಿ ಕಾಳಗಕ್ಕೆ ರೆಡಿಯಾಗಿದ್ದರು. ಯುವಕರಿದ್ದ ಕಾರು ಎದುರಿನಲ್ಲಿದ್ದ ಸ್ಕೂಟರಿಗೆ ಡಿಕ್ಕಿಯಾಗಿತ್ತು. ಸ್ಕೂಟರಿನಲ್ಲಿದ್ದ ಹಿಂದು