ನವಮಂಗಳೂರು ಬಂದರಿಗೆ ‘ಸೆವೆನ್ ಸೀಸ್ ಮರೈನರ್’ ಹಡಗು ಆಗಮನ
ನವಮಂಗಳೂರು ಬಂದರು ಪ್ರಾಧಿಕಾರವು ಈ ಸಾಲಿನ 6ನೇ ಹಾಗೂ 2023-24ನೇ ಆರ್ಥಿಕ ವರ್ಷದ ಕೊನೆಯ ಕ್ರೂಝ್ ‘ಸೆವೆನ್ ಸೀಸ್ ಮರೈನರ್’ನ್ನು ಬರಮಾಡಿಕೊಂಡಿತು.


ಸೆವೆನ್ ಸೀಸ್ ಮರೈನರ್ 610 ಪ್ರಯಾಣಿಕರು ಮತ್ತು 440 ಸಿಬ್ಬಂದಿಯನ್ನು ಹೊತ್ತು ಮಂಗಳೂರಿಗೆ ಆಗಮಿಸಿದ್ದು, ಪ್ರವಾಸಿಗರಿಗೆ ನವ ಮಂಗಳೂರು ಬಂದರಿನ ಹಡಗು ತಂಗುದಾಣದಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಪ್ರವಾಸಿಗರು ಕರಾವಳಿಯ ಪ್ರಸಿದ್ಧ ಪ್ರವಾಸಿ ತಾಣಗಳು, ದೇವಾಲಯ, ಮಾರುಕಟ್ಟೆ ಮತ್ತು ಅಂಗಡಿಗಳಿಗೆ ತೆರಳಲು ಅನುಕೂಲವಾಗುವಂತೆ ಬಸ್ ಮತ್ತು ಟ್ಯಾಕ್ಸಿಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಆಯುಷ್ ಸಚಿವಾಲಯವು ಸ್ಥಾಪಿಸಿದ ಕೇಂದ್ರದಲ್ಲಿ ಪ್ರಯಾಣಿಕರು ಧ್ಯಾನದ ಅನುಭವ ಪಡೆದುಕೊಂಡರು. ತುಳುನಾಡಿನ ಯಕ್ಷಗಾನ ಕಲಾ ಪ್ರಕಾರವನ್ನು ಪ್ರದರ್ಶಿಸುವ ವಿಶಿಷ್ಟ ಸೆಲ್ಫಿ ಸ್ಟ್ಯಾಂಡ್ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು.


















