ಹುತಾತ್ಮ ಪ್ರವೀಣ್ ನೆಟ್ಟಾರು ಸ್ಮೃತಿ ದಿನ : ಸಂಸದರು, ಶಾಸಕರು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಿಂದ ದಿ.ಪ್ರವೀಣ್ ಪ್ರತಿಮೆಗೆ ಪುಷ್ಪ ನಮನ

ಕಳೆದ ಮೂರು ವರ್ಷದ ಹಿಂದೆ ಕ್ರೂರ ಮತಾಂಧ ಶಕ್ತಿಗಳ ಸಂಚಿಗೆ ಬಲಿಯಾದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಸ್ಮೃತಿ ದಿನ ಜು. 26ರಂದು ಅವರ ಮನೆಯಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಲಾಯಿತು.
ಸುಳ್ಯ ಬಿಜೆಪಿ ಮಂಡಲ ಉಪಾಧ್ಯಕ್ಷರಾದ ಆರ್. ಕೆ ಭಟ್ ಕುರುಂಬುಡೇಲು ಪ್ರಾಸ್ತವಿಕವಾಗಿ ಮಾತನಾಡಿ ಪ್ರವೀಣ್ ನೆಟ್ಟಾರು ಅಪ್ಪಟ ಪಕ್ಷ ನಿಷ್ಠ ಕಾರ್ಯಕರ್ತ, ಸಿದ್ಧಾಂತಕ್ಕೆ ಬದ್ಧನಾಗಿ ಪಕ್ಷಕ್ಕಾಗಿ ಕೆಲಸ ಮಾಡಿದವರು,ಅವರ ಆದರ್ಶವನ್ನು ನಾವು ಮೈಗೂಡಿಸಿಕೊಳ್ಳೋಣ ಎಂದರು. ಮಂಗಳೂರು ಲೋಕಸಭಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ ದೇಶದ ಗಡಿಯಲ್ಲಿ ಶತ್ರು ರಾಷ್ಟ್ರದೊಂದಿಗೆ ಹೋರಾಡಿ ಹುತಾತ್ಮರಾದ ಸೈನಿಕರಿದ್ದಾರೆ. ಆದರೆ ಓರ್ವ ಪಕ್ಷ ನಿಷ್ಠ, ಹಿಂದುತ್ವದ ಬದ್ಧತೆ ಹೊಂದಿದ ಪ್ರವೀಣ್ ರನ್ನು ದೇಶದ ಒಳಗೆ ಇರುವ ಮತೀಯ ಸಂಘಟನೆಗಳು ಹತ್ಯೆ ಮಾಡಿವೆ.ಆ ಸಂದರ್ಭದಲ್ಲಿ ಹಲವಾರು ವಿದ್ಯಾಮಾನಗಳು ನಡೆದು ಪಿ ಎಫ್ ಐ ನಿಷೇಧವು ಆಯಿತು. ಅಂತಹ ಒಬ್ಬ ಕಾರ್ಯಕರ್ತನನ್ನು ನಾವೆಲ್ಲರೂ ಸ್ಮರಿಸಿಕೊಳ್ಳುವುದು ಅನಿವಾರ್ಯ, ಪ್ರವೀಣ್ ಕುಟುಂಬದೊಂದಿಗೆ ನಾವಿದ್ದೇವೆ ಆ ಕಾರಣಕ್ಕಾಗಿ ಪಕ್ಷದ ಎಲ್ಲರೂ ಸೇರಿದ್ದೇವೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಮಾತನಾಡಿ ಸಂಘಟನೆ ಹಾಗೂ ಪಕ್ಷಕ್ಕಾಗಿ ಪ್ರಾಮಾಣಿಕ ಕೆಲಸ ಮಾಡಿದವರು ಪ್ರವೀಣ್ ನೆಟ್ಟಾರು ಎಂದರು. ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ, ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಬಹಳ ದುಃಖಕರ, ಅವರ ಬಲಿದಾನ ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.ನಂತರ ದಿ. ಪ್ರವೀಣ್ ಪ್ರತಿಮೆಗೆ ಪುಷ್ಪ ನಮನ ಮಾಡಲಾಯಿತು.
ಕಾರ್ಗಿಲ್ ವಿಜಯ್ ದಿವಸದ ನೆನಪಿಗಾಗಿ ನಿವೃತ್ತ ಸೈನಿಕ ಕ್ಯಾಪ್ಟನ್ ಸುದಾನಂದ ಮಣಿಯಾಣಿ ಇವರನ್ನು ಗೌರವಿಸಲಾಯಿತು.ಒಂದು ಗಿಡ ತಾಯಿ ಹೆಸರಿ (ಏಕ್ ಪೇಡ್ ಮಾ ಸೇ ನಾಮ್ )ನಲ್ಲಿ ಕಾರ್ಯಕ್ರಮವನ್ನು ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಇವರು ಗಿಡ ನೆಡುವ ಮೂಲಕ ಆಚರಿಸಿದರು. ಬೆಳ್ಳಾರೆ ಬಿಜೆಪಿ ಶಕ್ತಿ ಕೇಂದ್ರದ ಎದುರುಗಡೆ ಮಾನ್ಯ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಹಾಗೂ ಮಂಡಲ ಅಧ್ಯಕ್ಷ ವೆಂಕಟ್ ವಲಳಂಬೆ ಗಿಡ ನೆಡುವ ಮೂಲಕ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಜಿಯವರ “ಏಕ್ ಪೇಡ್ ಮಾ ಕೇ ನಾಮ್” ಕಾರ್ಯಕ್ರಮವನ್ನು ಆಚರಿಸಲಾಯಿತು.
ಬೆಳ್ಳಾರೆ ಗ್ರಾಮದ ಆಯ್ದ ಅಶಕ್ತರಿಗೆ ಸಹಾಯ ನೀಡಲಾಯಿತು.ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಕೇಶ್ ರೈ ಕೆಡೆಂಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ, ವಿಕಸಿತ ಭಾರತ ಜಿಲ್ಲಾ ಸಂಚಾಲಕ ಹರೀಶ್ ಕಂಜಿಪಿಲಿ, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್ ರೈ, ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅಜಿತ್ ರಾವ್, ಪ್ರ. ಕಾರ್ಯದರ್ಶಿ ಅನೂಪ್ ಬಿಳಿಮಲೆ, ಮಂಡಲ ಸಮಿತಿ ಪ್ರ. ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ, ಬೆಳ್ಳಾರೆ ಶಕ್ತಿ ಕೇಂದ್ರದ ಪ್ರಮುಖ್ ದಿಲೀಪ್ ಗಟ್ಟಿಗಾರು, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶ್ರೀಕಾಂತ್ ಮಾವಿನ ಕಟ್ಟೆ,ಪಕ್ಷದ ಅನ್ಯಾನ್ಯ ಜವಾಬ್ದಾರಿ ಮುಖಂಡರು, ಕಾರ್ಯಕರ್ತರು ಹಾಗೂ ಪ್ರವೀಣ್ ನೆಟ್ಟಾರು ಮನೆಯವರು ಉಪಸ್ಥಿತರಿದ್ದರು. ದಿ. ಪ್ರವೀಣ್ ನೆಟ್ಟಾರು ಸ್ಮರಣಾರ್ಥ ಸುಳ್ಯ ಬಿಜೆಪಿ ಯುವ ಮೋರ್ಚಾ ವತಿಯಿಂದ ಕೆ ವಿ ಜಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು. ಮಂಡಲ ಅಧ್ಯಕ್ಷರಾದ ವೆಂಕಟ್ ವಲಳಂಬೆ, ಪ್ರವೀಣ್ ನೆಟ್ಟಾರು ಪತ್ನಿ ನೂತನ ಪ್ರವೀಣ್ ಸಹಿತ ಹಲವರು ರಕ್ತದಾನ ಮಾಡಿದರು.