ಸುಳ್ಯ: ಅಂಗಾಂಗ ದಾನದ ಜಾಗೃತಿ ಮೂಡಿಸುವ ಸಲುವಾಗಿ ಬೀದಿ ನಾಟಕ ಪ್ರದರ್ಶನ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಹಾಗೂ ನೆಹರು ಮೆಮೋರಿಯಲ್ ಕಾಲೇಜ್ ಸುಳ್ಯ ಇದರ ಸಹಯೋಗದಲ್ಲಿ ವಿಶ್ವ ಅಂಗದಾನ ದಿನಾಚರಣೆಯ ಕುರಿತು ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಅಂಗದಾನದ ಜಾಗೃತಿ ಮೂಡಿಸುವ ಸಲುವಾಗಿ ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ರಚನಾ ಶಾರೀರ ವಿಭಾಗದ ಮುಂದಾಳತ್ವದಲ್ಲಿ, ಎನ್.ಎಂ.ಸಿ ಕಾಲೇಜಿನ ಐ.ಕ್ಯೂ.ಏ.ಸಿ ವಿಭಾಗ ಹಾಗೂ ಎನ್. ಎಂ.ಸಿ. ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿಯ ಸಹಭಾಗಿತ್ವದಲ್ಲಿ ಬೀದಿ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಯಾದ ಆರ್ಕಿಟೆಕ್ಟ್ ಅಕ್ಷಯ್ ಕೆ ಸಿ, ಎನ್ ಎಂ ಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ., ಎನ್ ಎಂ ಪಿಯುಸಿ ಕಾಲೇಜಿನ ಪ್ರಾಂಶುಪಾಲಾರಾದ ಶ್ರೀಮತಿ ಮಿಥಾಲಿ ಪಿ. ರೈ, ಎನ್ ಎಂ ಸಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ರತ್ನಾವತಿ ಡಿ, ಎನ್ ಎಂ ಸಿ ಕಾಲೇಜಿನ ಐ ಕ್ಯು ಏ ಸಿ ವಿಭಾಗದ ಸಂಯೋಜಕರಾದ ಡಾ. ಮಮತಾ ಪಾರೆಪ್ಪಾಡಿ,
ಕೆ ವಿ ಜಿ ಆಯುರ್ವೇದ ಕಾಲೇಜಿನ ರಚನಾ ಶಾರೀರ ವಿಭಾಗದ ಮುಖ್ಯಸ್ಥರಾದ ಡಾ. ವಿನಯ್ ಶಂಕರ್ ಭಾರಧ್ವಾಜ್, ಎನ್ ಎಂ ಸಿ, ಎನ್ ಎಂ ಪಿಯುಸಿ ಹಾಗೂ ಕೆ ವಿ ಜಿ ಆಯುರ್ವೇದ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಕೆ ವಿ ಜಿ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರಿ ನೀಲಿಮಾ ಮತ್ತು ಬಳಗ ಪ್ರಾರ್ಥಿಸಿ,
ಕುಮಾರಿ ಮಾನ್ಯ ಅಂಬೆಕಲ್ಲು ನಿರೂಪಿಸಿ,
ಧ್ಯಾನ ವಿಜಯ್ ಸ್ವಾಗತಿಸಿ ವಂದಿಸಿದರು.